ನೀತಿಶಾಸ್ತ್ರದ ಸಾರ (Essence of Ethics)
ನೀತಿಶಾಸ್ತ್ರವು ಮಾನವ
ನಡವಳಿಕೆ ಮತ್ತು
ನಿರ್ಧಾರಗಳ ನೈತಿಕತೆಯನ್ನು ಅಧ್ಯಯನ
ಮಾಡುವ
ಒಂದು
ಶಾಖೆಯಾಗಿದೆ. ಇದು
ಒಳ್ಳೆಯದು ಮತ್ತು
ಕೆಟ್ಟದ್ದು, ಸರಿ
ಮತ್ತು
ತಪ್ಪು,
ನ್ಯಾಯ
ಮತ್ತು
ಅನ್ಯಾಯದಂತಹ ಪರಿಕಲ್ಪನೆಗಳನ್ನು ಪರಿಶೀಲಿಸುತ್ತದೆ. ನೀತಿಶಾಸ್ತ್ರದ ಉದ್ದೇಶವು ಜೀವನವನ್ನು ಹೇಗೆ
ನಡೆಸಬೇಕು ಎಂಬುದರ
ಕುರಿತು
ಮಾರ್ಗದರ್ಶನವನ್ನು ಒದಗಿಸುವುದು ಮತ್ತು
ಒಂದು
ಉತ್ತಮ
ಸಮಾಜವನ್ನು ಸೃಷ್ಟಿಸಲು ಸಹಾಯ
ಮಾಡುವುದು.
ನೀತಿ ಶಾಸ್ತ್ರವು ಈ ಕೆಳಗಿನ ಪ್ರಶ್ನೆಗಳನ್ನ ಉತ್ತರಿಸುವ ಪ್ರಯತ್ನ ಮಾಡುತ್ತದೆ
ನೀತಿ ಶಾಸ್ತ್ರದ ಕೆಲವು ಪ್ರಮುಖ ತತ್ವಗಳು ಈ ಕೆಳಗಿನಂತಿವೆ
ನೀತಿ ಶಾಸ್ತ್ರದ ಸುವರ್ಣ ನಿಯಮ
"Treat others as you would like to be treated."
- ನೀವು ಯಾವ ರೀತಿಯ ನಡವಳಿಕೆಯನ್ನು ನಿಮ್ಮ ಬಗ್ಗೆ ಬಯಸುತ್ತೀರೋ ಅದೇ ರೀತಿಯ ನಡವಳಿಕೆಯನ್ನು ಇತರರಿಗೆ ತೋರಿಸಿ.
ಉದಾಹರಣೆಗೆ:
·
ಇತರರು
ನಮ್ಮನ್ನು ಗೌರವದಿಂದ ಕಾಣಬೇಕೆಂದು ಬಯಸಿದರೆ ನಾವು
ಇತರರೊಂದಿಗೆ ಗೌರವದಿಂದ ವರ್ತಿಸಬೇಕು
·
ಇತರರು
ನಮ್ಮೊಂದಿಗೆ ಪ್ರಾಮಾಣಿಕವಾಗಿ ಇರಬೇಕೆಂದು ನಾವು
ಬಯಸಿದರೆ ಇತರೊಂದಿಗೆ ನಾವು
ಪ್ರಾಮಾಣಿಕವಾಗಿರಬೇಕು
·
ಇತರರು
ನಮ್ಮ
ಕುರಿತು
ಪರಾನುಭೂತಿಯನ್ನು ಹೊಂದಿರಬೇಕು ಎಂದು
ಇಚ್ಚಿಸಿದರೆ ನಾವು
ಇತರರೊಂದಿಗೆ ಪರಾನುಭೂತಿಯಿಂದ ವರ್ತಿಸಬೇಕು
ಸುವರ್ಣ ನಿಯಮದ ಪ್ರಾಮುಖ್ಯತೆ:
- ಇತರರ ಭಾವನೆಗಳನ್ನು
ಅರ್ಥಮಾಡಿಕೊಳ್ಳಲು ಮತ್ತು ಅವರ ದೃಷ್ಟಿಕೋನದಿಂದ ವಿಷಯಗಳನ್ನು ನೋಡಲು ನಮಗೆ ಸಹಾಯ ಮಾಡುತ್ತದೆ.
- ಎಲ್ಲರನ್ನೂ
ಗೌರವದಿಂದ ಕಾಣಬೇಕು ಮತ್ತು ನ್ಯಾಯಯುತವಾಗಿ ನಡೆಸಿಕೊಳ್ಳಬೇಕು ಎಂಬ ನಂಬಿಕೆಯನ್ನು ಬೆಂಬಲಿಸುತ್ತದೆ.
- ಪರಸ್ಪರ ಗೌರವ ಮತ್ತು ಸಹಾನುಭೂತಿಯ
ಆಧಾರದ ಮೇಲೆ ಸಮುದಾಯಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ.
- ಇತರರಿಗೆ ದಯೆ ಮತ್ತು ಉದಾರತೆಯಿಂದ
ನಡೆಸಿಕೊಳ್ಳುವ ಮೂಲಕ ನಮ್ಮ ಸ್ವಂತ ನೈತಿಕ ಸ್ವಭಾವವನ್ನು ಬೆಳೆಸಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ.
ಸುವರ್ಣ ನಿಯಮವು ಜೀವನವನ್ನು ನಡೆಸಲು ಒಂದು ಸರಳವಾದ ಆದರೆ ಶಕ್ತಿಯುತ ಮಾರ್ಗಸೂಚಿಯಾಗಿದೆ. ಇದು ನಮ್ಮ ನಡವಳಿಕೆಯನ್ನು ಮಾರ್ಗದರ್ಶಿಸಲು ಮತ್ತು ಒಂದು ಉತ್ತಮ ಜಗತ್ತನ್ನು ಸೃಷ್ಟಿಸಲು ನಮಗೆ ಸಹಾಯ ಮಾಡುತ್ತದೆ.
ದೈನಂದಿನ ಜೀವನದಲ್ಲಿ ನೈತಿಕತೆ
·
ನಾವು ನಮ್ಮ ಮಕ್ಕಳಿಗೆ ಸತ್ಯವನ್ನು ಹೇಳಲು ಮತ್ತು
ಸುಳ್ಳು ಹೇಳದಿರಲು ಕಲಿಸುವುದು.
·
ನಾವು ಕೆಲಸದಲ್ಲಿ ನಮ್ಮ ಸಹೋದ್ಯೋಗಿಗಳೊಂದಿಗೆ
ಮತ್ತು ಗ್ರಾಹಕರೊಂದಿಗೆ ಪ್ರಾಮಾಣಿಕವಾಗಿರುವುದು.
·
ನಾವು ಮತದಾನ ಮಾಡುವಾಗ ಹಣ ಮಧ್ಯಪಾನದ ಆಕರ್ಷಣೆಗಳಿಗೆ
ಒಳಗಾಗದೆ ಸೂಕ್ತ ವ್ಯಕ್ತಿಗೆ ಮತದಾನವನ್ನು ನೀಡುವುದು.
·
ನಾವು ನ್ಯಾಯಯುತವಾಗಿ ಮತ್ತು ಪಕ್ಷಪಾತವಿಲ್ಲದೆ
ನಿರ್ಧಾರವನ್ನು ತೆಗೆದುಕೊಳ್ಳುವುದು.
·
ನಾವು ಇತರರ ಭಾವನೆಗಳನ್ನು ಕೇಳಲು ಮತ್ತು ಅರ್ಥಮಾಡಿಕೊಳ್ಳಲು
ಪ್ರಯತ್ನ ಮಾಡುವುದು.
·
ನಾವು ಅಗತ್ಯವಿರುವವರಿಗೆ ಸಹಾಯ ಮಾಡಲು ನಮ್ಮ
ಸಮಯ ಮತ್ತು ಸಂಪನ್ಮೂಲಗಳನ್ನು ಮೀಸಲಾಗಿರಿಸುವುದು
·
ನಾವು ವಿಭಿನ್ನ ಸಂಸ್ಕೃತಿಗಳು ಮತ್ತು ಜೀವನ ವಿಧಾನಗಳ
ಬಗ್ಗೆ ತಿಳಿದುಕೊಳ್ಳಲು ಪ್ರಯತ್ನ ಮಾಡುವುದು.
·
ನಾವು ಎಲ್ಲಾ ಜನರನ್ನು - ವಯಸ್ಸು, ಲಿಂಗ, ಧರ್ಮ
ಅಥವಾ ಸಾಮಾಜಿಕ ಹಿನ್ನೆಲೆ ಲೆಕ್ಕಿಸದೆ - ಗೌರವದಿಂದ ಕಾಣುವುದು.
·
ನಾವು ಹಿರಿಯರನ್ನು ಗೌರವಿಸಬಹುದು ಮತ್ತು ಅವರಿಗೆ
ಸಹಾಯ ಮಾಡಬಹುದು.
·
ನಾವು ನಮ್ಮ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವ
ಸ್ವಾತಂತ್ರ್ಯವನ್ನು ಹೊಂದಿದ್ದೇವೆ, ಆದರೆ ನಮ್ಮ ನಿರ್ಧಾರಗಳು ಇತರರ ಹಕ್ಕುಗಳನ್ನು ಉಲ್ಲಂಘಿಸಬಾರದು.
·
ಸಮಾಜದಲ್ಲಿನ ಅನ್ಯಾಯದ ವಿರುದ್ಧ ಸೂಕ್ತ ಕ್ರಮಗಳನ್ನು
ತೆಗೆದುಕೊಳ್ಳುವುದು.
·
ನಾವು ಕಾನೂನುಗಳನ್ನು ಪಾಲಿಸುವ ಮೂಲಕ ನಮ್ಮ ಸ್ವಾತಂತ್ರ್ಯವನ್ನು
ಜವಾಬ್ದಾರಿಯುತವಾಗಿ ಬಳಸುವುದು.
ನೀತಿ ಶಾಸ್ತ್ರವು ಕೆಲವೊಮ್ಮೆ ನಮಗೆ ಸಂಕೀರ್ಣವೆನಿಸಬಹುದು,
ಏಕೆಂದರೆ ವಿಭಿನ್ನ ಪರಿಸ್ಥಿತಿಗಳ ಅನುಗುಣವಾಗಿ ವಿಭಿನ್ನವಾದ ನೈತಿಕ ತತ್ವಗಳನ್ನು ಅನುಸರಿಸಬೇಕಾಗುತ್ತದೆ.
ಆದರೂ ಸಹ ನೀತಿ ಶಾಸ್ತ್ರದ ಮೂಲ ತತ್ವಗಳನ್ನು ಕಲಿಯುವುದು
ಮತ್ತು ಅವುಗಳನ್ನು ನಮ್ಮ ಜೀವನದಲ್ಲಿ ಅನ್ವಯಿಸುವ ಪ್ರಯತ್ನ ಮಾಡುವುದರಿಂದ ನಾವು ಸಂತೋಷವಾಗಿರಬಹುದು
ಹಾಗೂ ಉತ್ತಮ ಸಮಾಜವನ್ನು ನಿರ್ಮಿಸಲು ಸಹ ಇದು ಸಹಕಾರಿಯಾಗಿದೆ.
ನೈತಿಕತೆಯ ನಿರ್ಧಾರಕಗಳು (Determinants of Ethics)
ಮನುಷ್ಯನ ಜೀವನದಲ್ಲಿ ನೈತಿಕತೆಯು ಒಂದು ಅವಿಭಾಜ್ಯ ಅಂಗವಾಗಿದೆ. ಒಳ್ಳೆಯದು ಮತ್ತು ಕೆಟ್ಟದ್ದು, ಸರಿ ಮತ್ತು ತಪ್ಪುಗಳ ನಡುವೆ ವ್ಯತ್ಯಾಸವನ್ನು ಕಲಿಸುವ ಮೂಲಕ ನಮ್ಮ ನಡವಳಿಕೆಗೆ ಮಾರ್ಗದರ್ಶನ ನೀಡುತ್ತದೆ. ಮನುಷ್ಯನ ನೈತಿಕತೆಯು ಒಂದು ಸಂಕೀರ್ಣ ರಚನೆಯಾಗಿದ್ದು ಅದು ವಿವಿಧ ಅಂಶಗಳಿಂದ ಪ್ರಭಾವಿತವಾಗಿರುತ್ತದೆ. ಕುಟುಂಬ, ಧರ್ಮ, ಶಿಕ್ಷಣ, ಸಮಾಜ, ಕಾನೂನು, ಮಾಧ್ಯಮ ಮತ್ತು ವೈಯಕ್ತಿಕ ಜೀವನ ಅನುಭವಗಳು ನಮ್ಮ ನೈತಿಕತೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ಪ್ರತಿಯೊಂದು ಅಂಶವು ನಮಗೆ ಒಳ್ಳೆಯದು ಮತ್ತು ಕೆಟ್ಟದ್ದರ ಕುರಿತು ಮಾರ್ಗದರ್ಶನ ನೀಡುತ್ತದೆ.
ಕುಟುಂಬ
ಕುಟುಂಬವು ವ್ಯಕ್ತಿಯ ಮೊದಲ ನೈತಿಕ ಬೆಳವಣಿಗೆಯ ಸ್ಥಳವಾಗಿದೆ. ಪೋಷಕರು ಮತ್ತು ಕುಟುಂಬದ ಸದಸ್ಯರು ತಮ್ಮ ಆಚಾರ, ನಂಬಿಕೆ ಮತ್ತು ಮೌಲ್ಯಗಳ ಮೂಲಕ ಮಕ್ಕಳಿಗೆ ನೈತಿಕ ಮಾರ್ಗದರ್ಶನ ನೀಡುತ್ತಾರೆ.
·
ಉದಾಹರಣೆ: ತಾಯಿ ತನ್ನ ಮಗುವಿಗೆ ಅಸತ್ಯ ಹೇಳುವುದನ್ನು ತಪ್ಪೆಂದು
ಕಲಿಸಿದರೆ, ಮಗು ಸತ್ಯ ಹೇಳುವ ನೈತಿಕತೆಯನ್ನು ಅಳವಡಿಸಿಕೊಳ್ಳುತ್ತದೆ.
ಧರ್ಮ
ಧರ್ಮವು ತನ್ನ ಆಜ್ಞೆಗಳು, ಸಿದ್ಧಾಂತಗಳು ಮತ್ತು ಪವಿತ್ರ ಗ್ರಂಥಗಳ ಮೂಲಕ ನೈತಿಕ ಮಾರ್ಗದರ್ಶನವನ್ನು ಒದಗಿಸುತ್ತದೆ.
·
ಉದಾಹರಣೆ: ಹಿಂದೂ ಧರ್ಮದಲ್ಲಿ 'ಅಹಿಂಸಾ ಪರಮೋ ಧರ್ಮಃ' ಎಂದು ಹೇಳಲಾಗುತ್ತದೆ, ಇದರಿಂದ ಹಿಂಸೆ ಮಾಡದಿರುವುದನ್ನು ನೈತಿಕವಾಗಿಯೂ ಧಾರ್ಮಿಕವಾಗಿಯೂ ಒತ್ತಿ ಹೇಳುತ್ತದೆ. ಇದರಿಂದ ಹಿಂಸೆ ತಪ್ಪು ಎಂಬ ನೈತಿಕ ತೀರ್ಮಾನಕ್ಕೆ ಬಂದು ಬಹಳಷ್ಟು ಜನ ಹಿಂಸೆಯಿಂದ ದೂರವಾಗುತ್ತಾರೆ.
ಶಿಕ್ಷಣ ಸಂಸ್ಥೆಗಳು
ಶಾಲೆ, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳಿಗೆ ತರ್ಕಬದ್ಧ ಆಲೋಚನೆ, ನೈತಿಕ ತತ್ವಗಳು ಮತ್ತು ಸಾಮಾಜಿಕ ಮೌಲ್ಯಗಳನ್ನು ಕಲಿಸುತ್ತವೆ.
·
ಉದಾಹರಣೆ: ಶಾಲೆಯಲ್ಲಿ 'ಪರಿಸರ ಸಂರಕ್ಷಣೆ' ಕುರಿತು ಪಾಠ ಕಲಿಸಿದಾಗ, ವಿದ್ಯಾರ್ಥಿಗಳು ಪ್ಲಾಸ್ಟಿಕ್ ಬಳಕೆಯ ಹಾನಿ ಹಾಗೂ ಪರಿಸರ ರಕ್ಷಣೆಯ ಮಹತ್ವವನ್ನು ಅರಿಯುತ್ತಾರೆ.
ಸಮಾಜ
ಸಮಾಜವು ತನ್ನ ಪರಂಪರೆ ಮತ್ತು ಸಂಸ್ಕೃತಿಗಳ ಮೂಲಕ ನೈತಿಕ ಮಾರ್ಗದರ್ಶನವನ್ನು ಒದಗಿಸುತ್ತದೆ.
·
ಉದಾಹರಣೆ: ಭಾರತದ ರಾಜಸ್ಥಾನದಲ್ಲಿರುವ ಪಿಪ್ಲಾಂತ್ರಿ ಎಂಬ ಹಳ್ಳಿಯು
ಒಂದು ವಿಶಿಷ್ಟ ಸಂಪ್ರದಾಯದ ಮೂಲಕ ತನ್ನನ್ನು ತಾನು ಬದಲಾಯಿಸಿಕೊಂಡಿದೆ. ಪ್ರತಿ ಬಾರಿ ಹೆಣ್ಣು ಮಗು
ಹುಟ್ಟಿದಾಗ ಗ್ರಾಮಸ್ಥರು ಗಿಡಗಳನ್ನು ನೆಟ್ಟು ಆಕೆಯ
ಆಗಮನವನ್ನು ಆಚರಿಸಿ ಪರಿಸರಕ್ಕೆ ಅನುಕೂಲ ಮಾಡಿಕೊಡುತ್ತಾರೆ.
ದೇಶದ ಕಾನೂನು
ಕಾನೂನುಗಳು ದೇಶದ ಪ್ರಜಾಪ್ರಭುತ್ವ ಮತ್ತು ನ್ಯಾಯಯುತತೆಗಳನ್ನು ಪ್ರತಿನಿಧಿಸುತ್ತವೆ. ಕಾನೂನುಗಳು ಯಾವುದು ಸರಿ ಮತ್ತು ಯಾವುದು ತಪ್ಪು ಎಂಬುದನ್ನು ನಿರ್ಧರಿಸಲು ಮಾಪಕವಾಗಿ ಕಾರ್ಯನಿರ್ವಹಿಸುತ್ತವೆ.
·
ಉದಾಹರಣೆ: ಚಾಲಕರು ಡ್ರೈವಿಂಗ್ ವೇಳೆ ಮದ್ಯಪಾನ ಮಾಡುವುದನ್ನು ನಿಷೇಧಿಸುತ್ತವೆ. ಇದು ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ಸರಿ ಎಂಬುದಾಗಿ ಕಾನೂನು ಸ್ಪಷ್ಟಪಡಿಸುತ್ತದೆ.
ಮಾಧ್ಯಮ
ಮಾಧ್ಯಮಗಳು ಸತ್ಯದ ವರದಿ, ಸಮಾಚಾರ ಮತ್ತು ವಿಶ್ಲೇಷಣೆಗಳ ಮೂಲಕ ಸಾರ್ವಜನಿಕ ಅರಿವನ್ನು ಹೆಚ್ಚಿಸುತ್ತವೆ ಮತ್ತು ನೈತಿಕ ವಿವೇಚನೆಗೆ ಪ್ರೇರೇಪಿಸುತ್ತವೆ.
·
ಉದಾಹರಣೆ: ಮಾಧ್ಯಮಗಳು ಭ್ರಷ್ಟಾಚಾರದ ದುಷ್ಪರಿಣಾಮಗಳನ್ನು ಸರಳವಾಗಿ ವಿವರಿಸಿದಾಗ, ಸಾರ್ವಜನಿಕರು ಭ್ರಷ್ಟಾಚಾರವನ್ನು ತಪ್ಪು ಎಂದು ಪರಿಗಣಿಸುತ್ತಾರೆ ಮತ್ತು ಭ್ರಷ್ಟಾಚಾರವನ್ನು ಕಡಿಮೆ ಮಾಡಲು ಸರ್ಕಾರದ
ಮೇಲೆ ಒತ್ತಡವನ್ನು ಹೆಚ್ಚಿಸುತ್ತಾರೆ.
ವ್ಯಕ್ತಿಯ ಜೀವನ ಅನುಭವ
ವ್ಯಕ್ತಿಯ ನೈಜ ಅನುಭವಗಳು, ತನ್ನ ವೈಫಲ್ಯ ಮತ್ತು ಶ್ರೇಯಸ್ಸುಗಳಿಂದ ಕಲಿತ ಪಾಠಗಳು, ತನ್ನ ನೈತಿಕತೆಯ ದೃಷ್ಟಿಕೋನವನ್ನು ರೂಪಿಸುತ್ತವೆ.
·
ಉದಾಹರಣೆ: ಕಠಿಣ ಪರಿಶ್ರಮದಿಂದ ಯಶಸ್ಸು ಸಾಧಿಸಿದ ವ್ಯಕ್ತಿಯು, ಪರಿಶ್ರಮದ ಮೌಲ್ಯವನ್ನು ಅರಿಯುತ್ತಾನೆ ಮತ್ತು ಅದನ್ನು ಸರಿ ಎಂಬುದಾಗಿ ನಂಬುತ್ತಾನೆ.
ಈ ಎಲ್ಲಾ ಅಂಶಗಳು ಒಟ್ಟಾಗಿ ನಮ್ಮ ನೈತಿಕತೆಯನ್ನು ರೂಪಿಸುತ್ತವೆ ಮತ್ತು ಸರಿ ಮತ್ತು ತಪ್ಪು ಎಂದು ನಿರ್ಧರಿಸಲು ಸಹಾಯ ಮಾಡುತ್ತವೆ. ನೈತಿಕತೆಯು ಒಂದು ನಿರಂತರ ಪ್ರಕ್ರಿಯೆಯಾಗಿದ್ದು ಅದು ಜೀವನದುದ್ದಕ್ಕೂ ಬೆಳೆಯುತ್ತದೆ ಮತ್ತು ವಿಕಸನಗೊಳ್ಳುತ್ತದೆ. ನಾವು ಹೊಸ ಅನುಭವಗಳನ್ನು ಪಡೆದಂತೆ ಮತ್ತು ಜಗತ್ತಿನ ಬಗ್ಗೆ ಹೆಚ್ಚಿನ ತಿಳುವಳಿಕೆಯನ್ನು ಪಡೆದಂತೆ, ನಮ್ಮ ನೈತಿಕತೆಯು ಸಹ ಬದಲಾಗುತ್ತದೆ. ಯಾವಾಗಲೂ ನಮ್ಮ ನೈತಿಕತೆಯನ್ನು ಪ್ರಶ್ನಿಸಲು ಮತ್ತು ನಮ್ಮ ನಂಬಿಕೆಗಳನ್ನು ಪುನರ್ಮೌಲ್ಯಮಾಪನ ಮಾಡಲು ಸಿದ್ಧರಾಗಿರಬೇಕು.
ಒಳ್ಳೆಯ ನೈತಿಕತೆಯನ್ನು ಬೆಳೆಸಿಕೊಳ್ಳುವುದು ಒಬ್ಬ ವ್ಯಕ್ತಿಯಾಗಿ ಮತ್ತು ಒಂದು ಸಮಾಜವಾಗಿ ನಾವು ಬೆಳೆಯಲು ಅಗತ್ಯವಾಗಿರುತ್ತದೆ. ನೈತಿಕತೆಯು ನಮಗೆ ಒಟ್ಟಾಗಿ ಬದುಕಲು ಮತ್ತು ಒಂದು ನ್ಯಾಯಯುತ ಮತ್ತು ಸಮೃದ್ಧ ಸಮಾಜವನ್ನು ನಿರ್ಮಿಸಲು ಅಗತ್ಯವಾದ ಮಾರ್ಗದರ್ಶನ ಮತ್ತು ದಿಕ್ಕನ್ನು ನೀಡುತ್ತದೆ.
"ನೈತಿಕತೆಯು
ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ
ವ್ಯತ್ಯಾಸವನ್ನು ತಿಳಿದುಕೊಳ್ಳುವುದು ಮತ್ತು ಒಳ್ಳೆಯದನ್ನು ಆಯ್ಕೆ
ಮಾಡುವುದು.”
No comments:
Post a Comment