ನೈತಿಕತೆಯ ಪರಿಣಾಮಗಳು (Consequences of Ethics)
ನೈತಿಕತೆಯು ಒಬ್ಬ ವ್ಯಕ್ತಿಯ ಜೀವನದ ಮೇಲೆ ಮತ್ತು ಸಮಾಜದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಒಳ್ಳೆಯದು ಮತ್ತು ಕೆಟ್ಟದ್ದು, ಸರಿ ಮತ್ತು ತಪ್ಪುಗಳ ನಡುವೆ ವ್ಯತ್ಯಾಸವನ್ನು ಕಲಿಸುವ ಮೂಲಕ ನಮ್ಮ ನಡವಳಿಕೆಗೆ ಮಾರ್ಗದರ್ಶನ ನೀಡುತ್ತದೆ. ನೈತಿಕತೆಯು ಜವಾಬ್ದಾರಿಯುತ ನಾಗರಿಕರನ್ನು ರೂಪಿಸಲು, ಸಾಮಾಜಿಕ ಒಗ್ಗಟ್ಟನ್ನು ಉತ್ತೇಜಿಸಲು ಮತ್ತು ಒಂದು ನ್ಯಾಯಯುತ ಮತ್ತು ಸಮೃದ್ಧ ಸಮಾಜವನ್ನು ನಿರ್ಮಿಸಲು ಸಹಾಯ ಮಾಡುತ್ತದೆ.
ವೈಯಕ್ತಿಕ
ಹಂತದಲ್ಲಿ
ನಂಬಿಕೆ ಮತ್ತು ಗೌರವ
·
ಸತ್ಯ ಹೇಳುವುದರಿಂದ ನಂಬಿಕೆ ಮತ್ತು ಗೌರವ ಗಳಿಸಬಹುದು.
·
ಸುಳ್ಳು ಹೇಳುವುದರಿಂದ ಖ್ಯಾತಿ ಹಾಳಾಗಬಹುದು ಮತ್ತು ಸಂಬಂಧಗಳಿಗೆ ಹಾನಿಯಾಗಬಹುದು.
ಯಶಸ್ಸು ಮತ್ತು ಸಂತೋಷ
·
ಕೆಲಸದಲ್ಲಿ ಮತ್ತು ಸಂಬಂಧಗಳಲ್ಲಿ ನಿಷ್ಠಾವಂತರಾಗಿರುವುದರಿಂದ ಯಶಸ್ಸು ಮತ್ತು ಸಂತೋಷಕ್ಕೆ ಕಾರಣವಾಗಬಹುದು.
·
ನಿಷ್ಠಾವಂತಿಕೆ
ಇಲ್ಲದೆ ಹೋದಾಗ ನಂಬಿಕೆಯ
ಕೊರತೆಗೆ ಮತ್ತು ಸಂಘರ್ಷಗಳಿಗೆ ಕಾರಣವಾಗಬಹುದು.
ಆತ್ಮ-ತೃಪ್ತಿ
·
ಅಗತ್ಯವಿರುವವರಿಗೆ ಸಹಾಯ ಮಾಡುವುದರಿಂದ ಸಮಾಜದಲ್ಲಿ ಒಳ್ಳೆಯತನವನ್ನು ಹರಡಲು ಮತ್ತು ಆತ್ಮ ತೃಪ್ತಿಯನ್ನು ಪಡೆಯಲು ಸಹಾಯ ಮಾಡುತ್ತದೆ.
·
ಸ್ವಾರ್ಥವು ಒಬ್ಬ ವ್ಯಕ್ತಿಯನ್ನು ಒಂಟಿಯಾಗಿ ಮತ್ತು ಅತೃಪ್ತನನ್ನಾಗಿ ಮಾಡಬಹುದು.
ಸಾಮಾಜಿಕ ಹಂತದಲ್ಲಿ
ಸಾಮಾಜಿಕ ಒಗ್ಗಟ್ಟು
·
ಭಿನ್ನಾಭಿಪ್ರಾಯಗಳನ್ನು ಗೌರವಿಸುವುದರಿಂದ ಸಾಮಾಜಿಕ ಒಗ್ಗಟ್ಟನ್ನು ಉತ್ತೇಜಿಸಲು ಮತ್ತು ಸಂಘರ್ಷಗಳನ್ನು ತಡೆಯಲು ಸಹಾಯ ಮಾಡುತ್ತದೆ.
·
ಅಸಹಿಷ್ಣುತೆ ಹಿಂಸೆ ಮತ್ತು ಯುದ್ಧಕ್ಕೆ ಕಾರಣವಾಗಬಹುದು.
ಶಾಂತಿ ಹಾಗೂ ಸ್ಥಿರತೆ
·
ಎಲ್ಲರನ್ನು
ನ್ಯಾಯಯುತವಾಗಿ ನಡೆಸಿಕೊಳ್ಳುವುದರಿಂದ ಸಮಾಜದಲ್ಲಿ ಶಾಂತಿ ಹಾಗೂ ಸ್ಥಿರತೆಯನ್ನು ಸೃಷ್ಟಿಸಬಹುದು.
·
ಅನ್ಯಾಯವು ಅಸಮಾನತೆ, ದಂಗೆ ಮತ್ತು ಅಸ್ಥಿರತೆಗೆ ಕಾರಣವಾಗಬಹುದು.
ಆರ್ಥಿಕ ಬೆಳವಣಿಗೆ
·
ಒಂದು ಸಮಾಜದಲ್ಲಿ ನೈತಿಕತೆಯ ಉನ್ನತ ಮಟ್ಟವು ವ್ಯವಹಾರಗಳ ನಡುವೆ ಮತ್ತು ಜನರ ನಡುವೆ ನಂಬಿಕೆಯನ್ನು ಉತ್ತೇಜಿಸುತ್ತದೆ.
·
ಇದು ವಹಿವಾಟುಗಳ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ಹೂಡಿಕೆ ಮತ್ತು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
ದೀರ್ಘಕಾಲದ ಯಶಸ್ಸು
·
ನೈತಿಕವಾಗಿ
ಕಾರ್ಯನಿರ್ವಹಿಸುವ ಸಂಸ್ಥೆಗಳು ಗ್ರಾಹಕರ ನಂಬಿಕೆಯನ್ನು ಗಳಿಸಲು ಮತ್ತು ಉತ್ತಮ ಖ್ಯಾತಿಯನ್ನು ಕಾಪಾಡಿಕೊಳ್ಳಲು
ಹೆಚ್ಚು ಸಾಧ್ಯವಿದೆ.
·
ಇದು ದೀರ್ಘಕಾಲದ ಯಶಸ್ಸು ಮತ್ತು ಲಾಭದಾಯಕತೆಗೆ ಕಾರಣವಾಗಬಹುದು.
ರಾಷ್ಟ್ರೀಯ
ಹಂತದಲ್ಲಿ
ಸುರಕ್ಷತೆ ಮತ್ತು ಸುವ್ಯವಸ್ಥೆ
·
ಕಾನೂನುಗಳನ್ನು ಪಾಲಿಸುವುದು ಸಾರ್ವಜನಿಕ ಸುರಕ್ಷತೆ ಮತ್ತು ಸುವ್ಯವಸ್ಥೆಯನ್ನು ಉತ್ತೇಜಿಸುತ್ತದೆ.
·
ಕಾನೂನುಬಾಹಿರ ಚಟುವಟಿಕೆಗಳು ಅಸ್ಥಿರತೆ, ಅಪರಾಧ ಮತ್ತು ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಉಂಟುಮಾಡಬಹುದು.
ರಾಷ್ಟ್ರೀಯ ಏಕತೆ
·
ಧರ್ಮ, ಜಾತಿ ಅಥವಾ ಭಾಷೆಯನ್ನು ಲೆಕ್ಕಿಸದೆ ಎಲ್ಲಾ ನಾಗರಿಕರನ್ನು ಗೌರವಿಸುವುದು ರಾಷ್ಟ್ರೀಯ ಏಕತೆಯನ್ನು ಬಲಪಡಿಸುತ್ತದೆ.
·
ಭಾಷಾ ಅಥವಾ ಜನಾಂಗೀಯ ಭಿನ್ನಾಭಿಪ್ರಾಯಗಳು ರಾಷ್ಟ್ರೀಯ ಒಗ್ಗಟ್ಟಿಗೆ ಹಾನಿಯನ್ನುಂಟುಮಾಡಬಹುದು ಮತ್ತು ವಿಭಜನೆಗೆ ಕಾರಣವಾಗಬಹುದು.
ರಾಷ್ಟ್ರದ ಅಭಿವೃದ್ಧಿ
·
ಸಾರ್ವಜನಿಕ ಹಿತಕ್ಕಾಗಿ ಕೆಲಸ ಮಾಡುವುದು ಮತ್ತು ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡುವುದು ಒಂದು ಪ್ರಗತಿಪರ ಮತ್ತು ಸಮೃದ್ಧ ರಾಷ್ಟ್ರಕ್ಕೆ ಕಾರಣವಾಗುತ್ತದೆ.
·
ಸ್ವಾರ್ಥ ಮತ್ತು ಭ್ರಷ್ಟಾಚಾರವು ರಾಷ್ಟ್ರದ ಪ್ರಗತಿಯನ್ನು ಕುಂಠಿತಗೊಳಿಸಬಹುದು ಮತ್ತು ಜನರಲ್ಲಿ ಅಸಮಾಧಾನವನ್ನು ಉಂಟುಮಾಡಬಹುದು.
ಜಾಗತಿಕ ಹಂತದಲ್ಲಿ
ಅಂತರರಾಷ್ಟ್ರೀಯ ಶಾಂತಿ
·
ಶಾಂತಿಯುತ ಸಹಬಾಳ್ವೆ ಮತ್ತು ರಾಷ್ಟ್ರಗಳ ನಡುವಿನ ಸಂವಾದವನ್ನು ಉತ್ತೇಜಿಸುವುದು ಜಾಗತಿಕ ಶಾಂತಿ ಮತ್ತು ಸ್ಥಿರತೆಗೆ ಕಾರಣವಾಗುತ್ತದೆ.
·
ಯುದ್ಧ ಮತ್ತು ಹಿಂಸಾಚಾರವು ಜೀವಹಾನಿ, ಸ್ಥಳಾಂತರ ಮತ್ತು ಜಾಗತಿಕ ಅಸ್ಥಿರತೆಗೆ ಕಾರಣವಾಗಬಹುದು.
ಮಾನವೀಯತೆ
·
ಜನಾಂಗ, ಧರ್ಮ ಅಥವಾ ರಾಷ್ಟ್ರೀಯತೆಯನ್ನು ಲೆಕ್ಕಿಸದೆ ಎಲ್ಲಾ ಮಾನವರನ್ನು ಗೌರವಿಸುವುದು ಮಾನವೀಯತೆಯನ್ನು ಉತ್ತೇಜಿಸುತ್ತದೆ.
·
ಜನಾಂಗೀಯತೆ ಮತ್ತು ತಾರತಮ್ಯವು ಹಿಂಸೆ, ಸಂಘರ್ಷ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗಬಹುದು.
ಪರಿಸರ ಸಂರಕ್ಷಣೆ
·
ಪರಿಸರವನ್ನು ರಕ್ಷಿಸಲು ಮತ್ತು ಭವಿಷ್ಯದ ಪೀಳಿಗೆಗಳಿಗೆ ಉತ್ತಮವಾದ
ಪರಿಸರವನ್ನು ಬಿಟ್ಟುಕೊಡಲು ಜಾಗತಿಕ ಸಹಕಾರವು ಅಗತ್ಯವಾಗಿದೆ.
·
ಪರಿಸರದ ಅವನತಿಯು ಹವಾಮಾನ ಬದಲಾವಣೆ, ನೈಸರ್ಗಿಕ ವಿಕೋಪಗಳು ಮತ್ತು ಜೀವವೈವಿಧ್ಯದ ನಷ್ಟಕ್ಕೆ ಕಾರಣವಾಗಬಹುದು.
ಸಮಾಜದಲ್ಲಿ ನೈತಿಕತೆಯನ್ನು
ಉತ್ತೇಜಿಸುವ ಕ್ರಮಗಳು
ನೀತಿಶಾಸ್ತ್ರವು
ನ್ಯಾಯಯುತ, ಸಮಾನ ಮತ್ತು ಅಭಿವೃದ್ಧಿ ಹೊಂದುತ್ತಿರುವ ಸಮಾಜದ ತಳಹದಿಯಾಗಿ ಕಾರ್ಯನಿರ್ವಹಿಸುತ್ತದೆ.
ಎಲ್ಲಾ ಹಂತಗಳಲ್ಲಿ ನೈತಿಕ ತತ್ವಗಳನ್ನು ಬೆಳೆಸುವ ಮೂಲಕ, ನಾವು ಸಾಮರಸ್ಯದ ಸಹಬಾಳ್ವೆಯನ್ನು ಬೆಳೆಸಿಕೊಳ್ಳಬಹುದು,
ಮಾನವ ಯೋಗಕ್ಷೇಮವನ್ನು ಉತ್ತೇಜಿಸಬಹುದು ಮತ್ತು ಭವಿಷ್ಯದ ಪೀಳಿಗೆಗೆ ನಮ್ಮ ಗ್ರಹವನ್ನು ರಕ್ಷಿಸಬಹುದು.
ವೈಯಕ್ತಿಕ ಜವಾಬ್ದಾರಿ
·
ನೈತಿಕತೆಯು ವೈಯಕ್ತಿಕ ಮಟ್ಟದಲ್ಲಿ ಪ್ರಾರಂಭವಾಗುತ್ತದೆ. ನಮ್ಮ
ಸ್ವಯಂ
ಮೌಲ್ಯಗಳು ಮತ್ತು
ನಂಬಿಕೆಗಳನ್ನು ಪರೀಕ್ಷಿಸುವ ಮೂಲಕ
ಮತ್ತು
ನಮ್ಮ
ದೈನಂದಿನ ಜೀವನದಲ್ಲಿ ಒಳ್ಳೆಯ
ನಡವಳಿಕೆಯನ್ನು ಆಯ್ಕೆ
ಮಾಡುವ
ಮೂಲಕ
ನಾವು
ನೈತಿಕತೆಯನ್ನು ಉತ್ತೇಜಿಸಬಹುದು.
·
ಉದಾಹರಣೆಗೆ, ಸಾರ್ವಜನಿಕ ಸ್ಥಳಗಳಲ್ಲಿ ಕಸವನ್ನು ಎಲ್ಲೆಂದರಲ್ಲಿ
ಎಸೆಯದಿರುವುದು, ಪಡೆದ ಸಾಲವನ್ನು ಸೂಕ್ತ ಸಮಯದಲ್ಲಿ ವಾಪಸ್ ನೀಡುವುದು ಇಂತಹ ಸಣ್ಣ ಕಾರ್ಯಗಳು ಸಹ
ಉತ್ತಮವಾದ ನೈತಿಕ ಕಾರ್ಯಗಳಾಗಿವೆ
ಕುಟುಂಬದ ಪಾತ್ರ
- ಪೋಷಕರು ಮಕ್ಕಳಿಗೆ
ಒಳ್ಳೆಯ ನೈತಿಕ ಮೌಲ್ಯಗಳನ್ನು ಕಲಿಸಬೇಕು. ಸತ್ಯ, ಕರುಣೆ, ಗೌರವ ಮತ್ತು ನ್ಯಾಯ ಮುಂತಾದ ಮೌಲ್ಯಗಳನ್ನು
ಉದಾಹರಣೆಯ ಮೂಲಕ ಮಕ್ಕಳಿಗೆ ರೂಢಿಸಬಹುದು.
- ಮಕ್ಕಳು ತಮ್ಮ ಪೋಷಕರ ನಡವಳಿಕೆಯನ್ನು
ಗಮನಿಸುತ್ತಾರೆ, ಆದ್ದರಿಂದ ಪೋಷಕರು ತಾವು ನೀಡುವ ಪಾಠಗಳನ್ನು ತಮ್ಮ ಜೀವನದಲ್ಲಿ ಅನುಸರಿಸುವುದು ಮುಖ್ಯ.
ಶಿಕ್ಷಣ ಸಂಸ್ಥೆಗಳ ಸಹಕಾರ
- ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳು
ನೈತಿಕ ತತ್ವಗಳು, ಸಾಮಾಜಿಕ ನ್ಯಾಯ ಮತ್ತು ಜವಾಬ್ದಾರಿಯುತ ನಾಗರೀಕತೆಯ ಕುರಿತು ವಿದ್ಯಾರ್ಥಿಗಳಿಗೆ ಕಲಿಸಬೇಕು.
- ಈ ವಿಷಯಗಳನ್ನು ಪಠ್ಯಕ್ರಮದಲ್ಲಿ ಸೇರ್ಪಡಿಸುವುದರ ಜೊತೆಗೆ, ಶಿಕ್ಷಕರು ನೈತಿಕ ಸಂದರ್ಭಗಳನ್ನು ಚರ್ಚಿಸುವ ಮೂಲಕ ಮತ್ತು ವಿದ್ಯಾರ್ಥಿಗಳು ಸಮಸ್ಯೆಗಳನ್ನು ಪರಿಹಾರ ಮಾಡಲು ಒಳ್ಳೆಯ ತೀರ್ಮಾನ ಗಳನ್ನು ತೆಗೆದುಕೊಳ್ಳುವಂತೆ ಪ್ರೋತ್ಸಾಹಿಸುವ ಮೂಲಕ ನೈತಿಕ ಚಿಂತನೆಯನ್ನು ಬೆಳೆಸಬಹುದು.
ಮಾಧ್ಯಮದ ಜವಾಬ್ದಾರಿ
·
ಮಾಧ್ಯಮ
ಸಂಸ್ಥೆಗಳು ಸತ್ಯವನ್ನು ಆಧರಿಸಿದ ವರದಿಗಳನ್ನು ಪ್ರಸಾರ
ಮಾಡುವ
ಮೂಲಕ
ಮತ್ತು
ನೈತಿಕ
ಸಮಸ್ಯೆಗಳ ಕುರಿತು
ಚರ್ಚೆಯನ್ನು ಉತ್ತೇಜಿಸುವ ಮೂಲಕ
ಸಾರ್ವಜನಿಕ ಜಾಗೃತಿಯನ್ನು ಹೆಚ್ಚಿಸಬಹುದು.
ಸರ್ಕಾರಗಳು ಮತ್ತು ಸಂಸ್ಥೆಗಳ ಬದ್ಧತೆ
·
ಸರ್ಕಾರಗಳು ಮತ್ತು
ಸಂಸ್ಥೆಗಳು ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು ಮತ್ತು
ತಮ್ಮ
ಕ್ರಮಗಳಿಗೆ ಉತ್ತರದಾಯಿಗಳಾಗಿರಬೇಕು.
·
ಇದು
ಭ್ರಷ್ಟಾಚಾರವನ್ನು ಕಡಿಮೆ
ಮಾಡಲು
ಮತ್ತು
ನಾಗರೀಕರ ನಂಬಿಕೆಯನ್ನು ಉಳಿಸಿಕೊಳ್ಳಲು ಸಹಾಯ
ಮಾಡುತ್ತದೆ.
ನೈತಿಕ ನಾಯಕತ್ವ
·
ಸಮಾಜದಲ್ಲಿ ಗೌರವವನ್ನು ಪಡೆದಿರುವ ವ್ಯಕ್ತಿಗಳು ಧೈರ್ಯದಿಂದ ನೈತಿಕ
ನಿಲುವುಗಳನ್ನು ತೆಗೆದುಕೊಳ್ಳಬೇಕು. ಇತರರು
ತಮ್ಮನ್ನು ಅನುಸರಿಸುವಂತೆ ಪ್ರೇರೇಪಿಸಲು ಇದು
ಸಹಾಯ
ಮಾಡುತ್ತದೆ.
·
ಉದಾಹರಣೆಗೆ, ಪ್ರಭಾವಿ ವ್ಯಕ್ತಿಯೊಬ್ಬರು ಒಂದು
ಸಾಮಾಜಿಕ ಕಾರ್ಯಕ್ಕೆ ದೇಣಿಗೆ
ನೀಡಿದರೆ, ಅದು
ಇತರರನ್ನು ಸಹ
ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಬಹುದು.
ಒಟ್ಟಾರೆಯಾಗಿ, ನೈತಿಕತೆಯು
ಜೀವನದ ಎಲ್ಲಾ ಕ್ಷೇತ್ರಗಳಲ್ಲಿಯೂ ಮಹತ್ವದ ಪಾತ್ರವನ್ನು ವಹಿಸುತ್ತದೆ. ನಾವು
ವೈಯಕ್ತಿಕವಾಗಿ ಮತ್ತು ಸಾಮಾಜಿಕವಾಗಿ ಉತ್ತಮ ಜೀವನವನ್ನು ನಡೆಸಲು ಬಯಸಿದರೆ, ನಾವು
ಉತ್ತಮ ನೈತಿಕತೆಯನ್ನು ಬೆಳೆಸಿಕೊಳ್ಳಬೇಕು ಮತ್ತು ಅದನ್ನು ನಮ್ಮ ಸಮಾಜದಲ್ಲಿ ಉತ್ತೇಜಿಸಬೇಕು.
ನೀತಿ ಶಾಸ್ತ್ರದ ಆಯಾಮಗಳು (Dimensions of Ethics)
ನೀತಿ ಶಾಸ್ತ್ರದಲ್ಲಿ ಐದು ಪ್ರಮುಖವಾದ ಆಯಾಮಗಳಿವೆ. ಈ ಪ್ರತಿಯೊಂದು ಆಯಾಮವು ನೈತಿಕತೆಯನ್ನು ವಿಭಿನ್ನ ರೀತಿಯಲ್ಲಿ ವ್ಯಾಖ್ಯಾನಿಸುತ್ತದೆ ಮತ್ತು ನಮ್ಮ ನಿರ್ಧಾರಗಳನ್ನು ಮಾರ್ಗದರ್ಶನ ಮಾಡಲು ವಿಭಿನ್ನ ಮಾನದಂಡಗಳನ್ನು ಒದಗಿಸುತ್ತದೆ.
·
ಉಪಯುಕ್ತತಾವಾದ (Utilitarian Approach)
·
ಸದ್ಗುಣಗಳ ವಿಧಾನ (Virtue Approach)
·
ಸಾರ್ವತ್ರಿಕ ಒಳಿತು ವಿಧಾನ (Common Good Approach)
·
ಹಕ್ಕುಗಳ ವಿಧಾನ (Rights Approach)
·
ನ್ಯಾಯೋಚಿತ ವಿಧಾನ (Justice Approach)
1.
ಉಪಯುಕ್ತತಾವಾದ (Utilitarian approach):
ಈ ತತ್ವವು ಒಂದು
ಕ್ರಿಯೆಯ
ನೈತಿಕತೆಯನ್ನು
ಅದರ
ಪರಿಣಾಮಗಳ
ಆಧಾರದ
ಮೇಲೆ
ನಿರ್ಣಯಿಸುತ್ತದೆ.
ಒಂದು
ಕ್ರಿಯೆ
ಹೆಚ್ಚಿನ
ಜನರಿಗೆ
ಹೆಚ್ಚಿನ
ಸಂತೋಷ
ಅಥವಾ
ಯೋಗಕ್ಷೇಮವನ್ನು
ತಂದರೆ,
ಅದು
ನೈತಿಕವಾಗಿ
ಸರಿಯಾಗಿದೆ
ಎಂದು
ಪರಿಗಣಿಸಲಾಗುತ್ತದೆ.
ಉದಾಹರಣೆ:
·
ಒಂದು ರೋಗದ
ಚಿಕಿತ್ಸೆಗಾಗಿ
ಹೊಸ
ಔಷಧಿಯನ್ನು
ಅಭಿವೃದ್ಧಿಪಡಿಸುವ
ಕಾರ್ಯದಲ್ಲಿ
ಕೆಲವು
ಪ್ರಾಣಿಗಳ
ಮೇಲೆ
ಔಷಧಿಯನ್ನು
ಪ್ರಯೋಗ
ಮಾಡಬೇಕು.
ಇದು
ಉಪಯುಕ್ತವಾದದ
ಪ್ರಕಾರ
ಒಂದು
ಸರಿಯಾದ
ನಿರ್ಧಾರ.
ಇದರಲ್ಲಿ
ಕೆಲವು
ಪ್ರಾಣಿಗಳಿಗೆ
ಸ್ವಲ್ಪ
ತೊಂದರೆಯಾದರೂ,
ಇದು
ಅನೇಕ
ಜನರ
ಜೀವನವನ್ನು
ಉಳಿಸಬಹುದು
ಮತ್ತು
ಅವರ
ಯೋಗಕ್ಷೇಮವನ್ನು
ಸುಧಾರಿಸಬಹುದಾಗಿದೆ.
·
ಸಾರ್ವಜನಿಕ ಸಾರಿಗೆಯನ್ನು
ಉತ್ತೇಜಿಸುವುದು
ಉಪಯುಕ್ತತಾವಾದದ
ಮತ್ತೊಂದು
ಉದಾಹರಣೆಯಾಗಿದೆ,
ಏಕೆಂದರೆ
ಇದು
ವಾತಾವರಣದ
ಮಾಲಿನ್ಯವನ್ನು
ಕಡಿಮೆ
ಮಾಡಲು
ಮತ್ತು
ಜನರಿಗೆ
ಹಣವನ್ನು
ಉಳಿಸಲು
ಸಹಾಯ
ಮಾಡುತ್ತದೆ.
2.
ಸದ್ಗುಣಗಳ
ವಿಧಾನ
(Virtue Approach):
ಈ ತತ್ವವು ಒಂದು
ಕ್ರಿಯೆಯ
ನೈತಿಕತೆಯನ್ನು
ಒಬ್ಬ
ವ್ಯಕ್ತಿಯ
ಸದ್ಗುಣಗಳ
ಆಧಾರದ
ಮೇಲೆ
ನಿರ್ಣಯಿಸುತ್ತದೆ.
ಒಬ್ಬ ವ್ಯಕ್ತಿಯ ಅನುಸರಿಸುವ ಮಾರ್ಗವು ಸರಿ ಇದ್ದರೆ ಆ ವ್ಯಕ್ತಿಯ ಕ್ರಿಯೆಗಳು
ಸಹ
ನೈತಿಕವಾಗಿ
ಸರಿಯಾಗಿವೆ
ಎಂದು
ಪರಿಗಣಿಸಲಾಗುತ್ತದೆ.
ಉದಾಹರಣೆ:
·
ಒಬ್ಬ ವೈದ್ಯನು
ತನ್ನ
ರೋಗಿಗಳಿಗೆ
ಪ್ರಾಮಾಣಿಕವಾಗಿ
ಮತ್ತು
ಕಾಳಜಿಯಿಂದ
ಚಿಕಿತ್ಸೆ
ನೀಡುವುದು
ಸದ್ಗುಣಗಳ
ವಿಧಾನದ
ಒಂದು
ಉದಾಹರಣೆಯಾಗಿದೆ.
·
ಒಬ್ಬ ವ್ಯಕ್ತಿಯು
ತನ್ನ
ಸಮುದಾಯದಲ್ಲಿ
ಸ್ವಯಂಸೇವಕರಾಗಿ
ದುಡಿಯುವುದು
ಸದ್ಗುಣಗಳ
ವಿಧಾನದ
ಮತ್ತೊಂದು
ಉದಾಹರಣೆಯಾಗಿದೆ.
3.
ಸಾರ್ವತ್ರಿಕ ಒಳಿತು ವಿಧಾನ (Common Good Approach):
ಈ ತತ್ವವು ಒಂದು
ಕ್ರಿಯೆಯ
ನೈತಿಕತೆಯನ್ನು
ಸಮುದಾಯದ
ಒಟ್ಟಾರೆ
ಯೋಗಕ್ಷೇಮದ
ಮೇಲೆ
ಅದರ
ಪರಿಣಾಮದ
ಆಧಾರದ
ಮೇಲೆ
ನಿರ್ಣಯಿಸುತ್ತದೆ.
ಒಂದು
ಕ್ರಿಯೆಯು
ಸಮುದಾಯಕ್ಕೆ
ಒಟ್ಟಾರೆಯಾಗಿ
ಲಾಭವನ್ನು
ನೀಡಿದರೆ,
ಅದು
ನೈತಿಕವಾಗಿ
ಸರಿಯಾಗಿದೆ
ಎಂದು
ಪರಿಗಣಿಸಲಾಗುತ್ತದೆ.
ಉದಾಹರಣೆ:
·
ಪರಿಸರವನ್ನು
ರಕ್ಷಿಸಲು
ಕಾನೂನುಗಳನ್ನು
ರಚಿಸುವುದು
ಸಾರ್ವತ್ರಿಕ
ಒಳಿತು
ವಿಧಾನದ
ಒಂದು
ಉದಾಹರಣೆಯಾಗಿದೆ.
·
ಯುದ್ಧವನ್ನು
ತಡೆಯಲು
ರಾಷ್ಟ್ರಗಳ
ನಡುವೆ
ಸಂವಾದವನ್ನು
ಉತ್ತೇಜಿಸುವುದು
ಸಾರ್ವತ್ರಿಕ
ಒಳಿತು
ವಿಧಾನದ
ಮತ್ತೊಂದು
ಉದಾಹರಣೆಯಾಗಿದೆ.
4.
ಹಕ್ಕುಗಳ
ವಿಧಾನ
(Rights Approach):
ಈ ತತ್ವವು ಪ್ರತಿಯೊಬ್ಬ
ವ್ಯಕ್ತಿಯೂ
ಮೂಲಭೂತ
ಹಕ್ಕುಗಳನ್ನು
ಹೊಂದಿದ್ದಾರೆ
ಎಂಬ
ತತ್ವದ
ಮೇಲೆ
ಆಧಾರಿತವಾಗಿದೆ.
ಒಂದು
ಕ್ರಿಯೆಯು
ಈ
ಹಕ್ಕುಗಳನ್ನು
ಗೌರವಿಸುತ್ತದೆಯೇ
ಅಥವಾ
ಉಲ್ಲಂಘಿಸುತ್ತದೆಯೇ
ಎಂಬುದರ
ಆಧಾರದ
ಮೇಲೆ
ಅದರ
ನೈತಿಕತೆಯನ್ನು
ನಿರ್ಣಯಿಸಲಾಗುತ್ತದೆ.
ಕೆಲವು
ಮೂಲಭೂತ
ಹಕ್ಕುಗಳ
ಉದಾಹರಣೆಗಳೆಂದರೆ
ಜೀವನದ
ಹಕ್ಕು,
ಸ್ವಾತಂತ್ರ್ಯದ
ಹಕ್ಕು,
ಮತ್ತು
ಅಭಿವ್ಯಕ್ತಿಯ
ಸ್ವಾತಂತ್ರ್ಯ.
ಉದಾಹರಣೆ:
·
ಒಬ್ಬ ಉದ್ಯೋಗಾರ್ಥಿಯನ್ನು
ಅವರ
ಧರ್ಮದ
ಆಧಾರದ
ಮೇಲೆ
ವಜಾಗೊಳಿಸುವುದು
ಹಕ್ಕುಗಳ
ವಿಧಾನದ
ದೃಷ್ಟಿಯಿಂದ
ನೈತಿಕವಾಗಿ
ತಪ್ಪು.
5.
ನ್ಯಾಯೋಚಿತ ವಿಧಾನ (Justice Approach):
ನ್ಯಾಯೋಚಿತ ವಿಧಾನವು
ಸಮಾನತೆ,
ನಿಷ್ಪಕ್ಷಪಾತತೆ
ಮತ್ತು
ಗೌರವದಂತಹ
ತತ್ವಗಳನ್ನು
ಒಳಗೊಳ್ಳುತ್ತದೆ.
ಸಮಾನರನ್ನ
ಸಮಾನವಾಗಿ
ಕಾಣಬೇಕು,
ಯಾರು
ಹೆಚ್ಚು
ಪ್ರಯತ್ನ
ಪಡುತ್ತಾರೋ
ಅವರು
ಹೆಚ್ಚು
ಲಾಭಗಳಿಗೆ
ಅರ್ಹರು,
ಯಾರಿಗೆ
ಹೆಚ್ಚು
ಅವಶ್ಯಕತೆ
ಇದೆಯೋ
ಅವರು
ಹೆಚ್ಚು
ಪಡೆಯಲು
ಅರ್ಹರು
ಮುಂತಾದವು
ನ್ಯಾಯೋಚಿತ
ವಿಧಾನದ
ಪ್ರಮುಖ
ತತ್ವಗಳಾಗಿವೆ
ಉದಾಹರಣೆ:
·
ಎಲ್ಲಾ ಉದ್ಯೋಗಾರ್ಥಿಗಳಿಗೂ
ಸಮಾನ
ವೇತನವನ್ನು
ನೀಡುವುದು
ನ್ಯಾಯೋಚಿತ
ವಿಧಾನದ
ಒಂದು
ಉದಾಹರಣೆಯಾಗಿದೆ.
·
ಒಂದು ಅಪರಾಧಕ್ಕಾಗಿ ಎಸಗಿದ ಶಿಕ್ಷೆಯು
ಅಪರಾಧದ
ಗಂಭೀರತೆಗೆ
ಸಮಾನವಾಗಿರಬೇಕು
ಎಂಬುದು
ನ್ಯಾಯೋಚಿತ
ವಿಧಾನದ
ಮತ್ತೊಂದು
ಉದಾಹರಣೆಯಾಗಿದೆ.
ಉತ್ತಮವಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಎಲ್ಲ ಸಮಯದಲ್ಲಿಯೂ ಸರಳವಾದ ವಿಷಯವೇನು ಅಲ್ಲ. ವಿಭಿನ್ನ ಸಂದರ್ಭಗಳಲ್ಲಿ ಯಾವ ನೈತಿಕ ತತ್ವವು ಅನ್ವಯಿಸುತ್ತದೆ ಎಂಬುದರ ಕುರಿತು ಹೆಚ್ಚಾಗಿ ಚರ್ಚೆಗಳು ನಡೆಯುತ್ತವೆ. ಕೆಲವೊಮ್ಮೆ, ವಿಭಿನ್ನ ತತ್ವಗಳು ಪರಸ್ಪರ ವಿರುದ್ಧವಾಗಿರಬಹುದು, ಒಂದು ನಿರ್ಧಾರವನ್ನು ತೆಗೆದುಕೊಳ್ಳುವುದನ್ನು ಕಷ್ಟಕರವಾಗಿಸುತ್ತದೆ. ಆದಾಗ್ಯೂ, ನೈತಿಕ ತತ್ವಗಳನ್ನು ಅರ್ಥಮಾಡಿಕೊಳ್ಳುವುದು ನಮ್ಮ ಜೀವನದಲ್ಲಿ ನೈತಿಕ ನಿರ್ಧಾರಗಳನ್ನು ತೆಗೆದುಕೊಳ್ಳಲು ನಮಗೆ ಸಹಾಯ ಮಾಡುತ್ತದೆ. ಈ ತತ್ವಗಳನ್ನು ಚಿಂತನಾಶೀಲವಾಗಿ ಪರಿಗಣಿಸುವ ಮೂಲಕ, ಉತ್ತಮವಾದ ನಿರ್ಧಾರವನ್ನು ತೆಗೆದುಕೊಳ್ಳುವ ಮೂಲಕ ನಾವು ಸಂತೃಪ್ತಿಯಿಂದ ಜೀವನವನ್ನು ನಡೆಸಬಹುದು ಹಾಗೂ ಉತ್ತಮ ಸಮಾಜವನ್ನು ನಿರ್ಮಿಸಬಹುದು.
ನೈತಿಕತೆಯು ಒಂದು ಪ್ರಯಾಣ ವಿದ್ದಂತೆ. ನಮ್ಮ ಗಮ್ಯಸ್ಥಾನವು ನಾವು ಪ್ರತಿ ದಿನವೂ ಮಾಡುವ
ಆಯ್ಕೆಗಳನ್ನು ಆಧರಿಸಿದೆ. ಉತ್ತಮ ಭವಿಷ್ಯವನ್ನು ನಿರ್ಮಿಸಲು ನಾವು ಪ್ರತಿಯೊಬ್ಬರೂ ನೈತಿಕವಾಗಿ ನಡೆದುಕೊಳ್ಳಬೇಕು
ಮತ್ತು ಒಬ್ಬರಿಗೊಬ್ಬರು ಜವಾಬ್ದಾರರಾಗಿರಬೇಕು.
No comments:
Post a Comment