Previous Year Questions
Section-I: Ethics
Essence, determinants and consequences of ethics in human action,
dimensions of ethics, Ethics in Private and Public Relationships.
·
ಮಾನವನ
ಕಾರ್ಯಗಳಲ್ಲಿ ನೀತಿಗಳ ನಿರ್ಧಾರಕಗಳು ಮತ್ತು
ಪರಿಣಾಮಗಳನ್ನು ಸೂಕ್ತ ಉದಾಹರಣೆಗಳೊಂದಿಗೆ ವಿವರಿಸಿ.
Explain the determinants and consequences of ethics in human action with
suitable Examples. (12.5 Marks) (2014)
·
ಸಾರ್ವಜನಿಕ
ಮತ್ತು ಖಾಸಗಿ ಸಂಬಂಧಗಳಲ್ಲಿ ನೀತಿಗಳ
ಪಾಲನೆಯ ಅವಶ್ಯಕತೆಯನ್ನು ವಿವರಿಸಿ. Explain the
essence of ethics in private and public relationships. (12.5 Marks) (2014)
Ethics in Public administration, Status and Sroblems
·
ಸಾರ್ವಜನಿಕ
ಸೇವೆಯ ಸುಧಾರಣೆಗಳನ್ನು ವಿವರಿಸಿ ಮತ್ತು ಭಾರತದಲ್ಲಿ
ಈ ಸುಧಾರಣೆಗಳ ಅವಶ್ಯಕತೆಯನ್ನು
ವಿವರಿಸಿ. Explain
public service reforms and the need for reforms in India. (12.5 Marks) (2014)
·
ಜನರು
ಎದುರಿಸುವ ಆಡಳಿತಾತ್ಮಕ ಸಮಸ್ಯೆಗಳು ಯಾವುವು? ಪರಿಣಾಮಕಾರಿ ಆಡಳಿತವನ್ನು
ನೀಡುವ ಮೂಲಕ ಈ ಸಮಸ್ಯೆಗಳನ್ನು
ಹೇಗೆ ಹೋಗಲಾಡಿಸುವಿರಿ? What
are the administrative problems faced by the people? How do you overcome these
problems by effective administration? (Not more than 3OO words) 20 Marks –
(2017)
Laws, rules, regulations and conscience as source of ethical
guidance
·
ನೀತಿ
ಮಾರ್ಗದರ್ಶನದ ಮೂಲವಾಗಿ ಮನಃಸಾಕ್ಷಿ, ಕಾನೂನುಗಳು,
ನಿಯಮಗಳು ಮತ್ತು ನಿಬಂಧನೆಗಳನ್ನು ಮೌಲ್ಯಮಾಪನ
ಮಾಡಿರಿ. Evaluate
laws, rules and regulations and conscience as source of ethical guidance. (12.5 Marks) (2014)
·
ಸಾರ್ವಜನಿಕ ಆಡಳಿತದಲ್ಲಿ ನೈತಿಕತೆಯ ಮಾರ್ಗದರ್ಶನದ ಮೂಲಾಧಾರವಾಗಿ ಆತ್ಮಸಾಕ್ಷಿಯ ಪಾತ್ರವೇನು? ರಾಜಕೀಯ ಒತ್ತಡಗಳು ಹಾಗೂ ಶಾಸನಬದ್ಧ ಹೊಣೆಗಾರಿಕೆಗಳು ಇದ್ದಾಗಿಯೂ ಒರ್ವ ವ್ಯಕ್ತಿಯ ಆತ್ಮ ಸಾಕ್ಷಿಯು ನೈತಿಕ ಆಡಳಿತಕ್ಕೆ ಹೇಗೆ ಎಡೆಮಾಡಿಕೊಟ್ಟಿದೆ ಎಂಬುದನ್ನು ಉದಾಹರಣೆಗಳೊಂದಿಗೆ ವಿವರಿಸಿ. What is the role of
conscience as a source of ethical guidance in public administration? Explain
with examples where following one's conscience led to ethical governance
despite legality and political pressures. (150 words |10 marks) 2025
·
ಈ ಹೇಳಿಕೆಯನ್ನು ಎರಡು ಉದಾಹರಣೆಗಳೊಂದಿಗೆ ಪರಿಶೀಲಿಸಿ — ಒಂದು ಕಾಯ್ದೆಯು ಕಾನೂನುಬದ್ದವಾಗಿರುತ್ತದೆ ಆದರೆ ನೈತಿಕವಾಗಿ ಪ್ರಶ್ನಾರ್ಹವಾಗಿರುತ್ತದೆ; ಹಾಗೂ ಮತ್ತೊಂದು ಕಾಯ್ದೆಯು ನೈತಿಕವಾಗಿರುತ್ತದೆ ಆದರೆ ಅದು ಕಾನೂನು ಬಾಹಿರವಾಗಿರುತ್ತದೆ. “Examine this statement
with two examples — one where an act is legal but ethically questionable, and
another where an act is ethical but illegal.” (150 words |10 marks) 2025
Ethical dilemmas in Government and Private institutions
·
ಸರ್ಕಾರ
ಮತ್ತು ಖಾಸಗಿ ಸಂಸ್ಥೆಗಳ ನೈತಿಕ
ಸಂಧಿಗ್ಧತೆಗಳ ಬಗ್ಗೆ ಟಿಪ್ಪಣಿಯನ್ನು ಬರೆಯಿರಿ.
Write
a note about ethical dilemmas in government and private institutions. [15 Marks] (2015)
·
ಒಂದು
ಸಂಸ್ಥೆಯಲ್ಲಿನ ಕೆಲವು ನೌಕರರು, ತಾವು
ವೈಯಕ್ತಿಕವಾಗಿ ಒಪ್ಪಿಕೊಳ್ಳದ ಕಾನೂನು ಬಾಹಿರ ಚಟುವಟಿಕೆಗಳಲ್ಲಿ
ಅವರ ಸಂಸ್ಥೆಯು ತೊಡಗಿಕೊಂಡಿರುವುದನ್ನು ಕಂಡುಕೊಂಡಿದ್ದಾರೆ. ಹಾಗಾದರೆ ಅವರು ನೌಕರರನ್ನು
ಎಚ್ಚರಿಸಬೇಕೆ? ಅಥವಾ ಉನ್ನತಾಧಿಕಾರಿಗಳ ಆದೇಶಗಳನ್ನು
ಪಾಲಿಸಬೇಕೆ? ಇಂಥ ನೈತಿಕ ಸಂಧಿಗ್ಧತೆಗಳನ್ನು
ಪರಿಹರಿಸಲು ಸಲಹೆಗಳನ್ನು ಸೂಚಿಸಿ. Some employees
in an organization have found that their organization is engaged in illegal
activities, which they personally disapprove. Should they blow the whistle? Or
should they follow orders from the top officials? Suggest measures to resolve
such Ethical Dilemmas. (Not more than 3OO words) 20 Marks (2017)
Accountability and Ethical Governance
·
ಸಾರ್ವಜನಿಕ
ಆಡಳಿತದಲ್ಲಿ ಜವಾಬ್ದಾರಿ ಹೊರುವಿಕೆ ಮತ್ತು ನೈತಿಕ ಆಡಳಿತದ
ಪ್ರಾಮುಖ್ಯತೆಯನ್ನು ವಿವರಿಸಿ. Explain
the importance of accountability and ethical governance in public
administration (12.5 Marks) (2014).
Strengthening of ethical and moral values in governance
·
ಆಡಳಿತದಲ್ಲಿ
ನೈತಿಕ ಮೌಲ್ಯಗಳನ್ನು ಬಲಪಡಿಸಲು ಸೂಕ್ತ ಸಲಹೆಗಳನ್ನು ನೀಡಿರಿ.
Give
the suitable suggestions for strengthening of ethical and moral values in
Governance. (12.5 Marks) (2014)
Ethical issues in international relations and funding
·
ಅಂತರರಾಷ್ಟ್ರೀಯ
ಸಂಬಂಧಗಳಲ್ಲಿನ ನೈತಿಕ ಸಮಸ್ಯೆಗಳನ್ನು ವಿಮರ್ಶಾತ್ಮಕವಾಗಿ
ವಿಶ್ಲೇಷಿಸಿ. Critically
analyze the ethical issues in International Relations.[15 Marks] (2015)
Corporate Governance
·
ಸಾಂಸ್ಥಿಕ
ಆಡಳಿತದ ತತ್ವಗಳನ್ನು ವಿವರಿಸಿ ಹಾಗೂ ಯಾವುದೇ
ಮೂರು ಭಾರತೀಯ ಕಂಪನಿಗಳ ಅತ್ಯುತ್ತಮ
ಆಚರಣೆ (corporate
practices) ಗಳಿಗೆ ಸಂಬಂಧಿಸಿದಂತೆ ಚರ್ಚಿಸಿ. Explain
the principles of Corporate Governance and discuss about any three Indian
companies in relation to their best corporate practices. (Not more than 3OO
words) 20 Marks (2017)
Concept of public service; Philosophical basis of governance;
Information Sharing and Transparency in government, Right to Information
·
ಮಾಹಿತಿ
ಹಕ್ಕು ಕಾಯ್ದೆಯ ಧ್ಯೇಯವೇನು? ಈ
ಕಾಯ್ದೆಯ ಉಪಬಂಧಗಳ ಅಡಿಯಲ್ಲಿರುವ ನೈತಿಕತೆಯನ್ನು
ಮೌಲ್ಯಮಾಪನ ಮಾಡಿ. What is the objective
of the Right
to Information Act?
Evaluate the ethics underlying
the provisions of this Act.[20 Marks] (2015)
Codes of ethics and Codes of conduct
·
ನಾಗರಿಕ
ಸೇವಾ ನೀತಿ ಸಂಹಿತೆಯ ಅವಶ್ಯಕತೆಯನ್ನು
ವಿಮರ್ಶಾತ್ಮಕವಾಗಿ ವಿಶ್ಲೇಷಿಸಿ. Critically
analyze the need for ethical civil service code. (12.5 Marks) (2014)
Citizen charters; Work culture; Quality of service delivery;
Utilization of public fund; Challenges of corruption
·
ಸಾರ್ವಜನಿಕ
ಸೇವೆಯಲ್ಲಿ ಮಾಹಿತಿ ಹಂಚಿಕೆ ಮತ್ತು
ನಾಗರಿಕ ಸನ್ನದುಗಳ ಅಗತ್ಯತೆಯನ್ನು ವಿವರಿಸಿ. Explain the essentials of
information sharing and citizen charter in public service. (12. 5 Marks) (2014)
·
ಸರ್ಕಾರದಲ್ಲಿನ
ಪ್ರಸಕ್ತ ಪರಿಸ್ಥಿತಿಯಲ್ಲಿ ಸೇವಾ ಪೂರೈಕೆಯ ಗುಣಮಟ್ಟ
ಮತ್ತು ನಡತೆಯ ಸಂಹಿತೆಗಳು ಅತಿ
ಮುಖ್ಯ ಎಂಬುದನ್ನು ವಿವರಿಸಿ. Describe codes of conduct and quality
of service delivery are most important at present scenario in governance. (12.5
Marks) (2014)
·
ಸಾರ್ವಜನಿಕ ಆಡಳಿತದಲ್ಲಿ
ಸಾರ್ವಜನಿಕ
ನಿಧಿಯ
ಸೂಕ್ತ
ಬಳಕೆ
ಮತ್ತು
ಭ್ರಷ್ಟಾಚಾರದ
ಸವಾಲುಗಳು
ಪ್ರಸಕ್ತದಲ್ಲಿನ
ಅತಿ
ಮುಖ್ಯ
ಅಂಶಗಳು.
ಈ
ಬಗ್ಗೆ
ವಿಮರ್ಶಾತ್ಮಕವಾಗಿ
ವಿವರಿಸಿ.
Appropriate
utilization of public fund and challenges of corruption are burning issues at
present in public administration. Critically evaluate. (12.5 Marks) (2014)
Human values - Lessons from the lives and teachings of great
leaders, reformers, administrators; Role of family, society, and educational
institutions in inculcating values
·
ಪ್ರಮುಖ
ನಾಯಕರುಗಳ ಬದುಕು ಮತ್ತು ಬೋಧನೆಗಳ
ಪಾಠಗಳು ಮಾನವ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದಕ್ಕೆ
ಸಹಾಯಕಾರಿ ಎನ್ನುವುದನ್ನು ಸೂಕ್ತ ಉದಾಹರಣೆಗಳೊಡನೆ ವಿವರಿಸಿ.
Describe
lessons from the lives and teachings of great leaders help in inculcating human
values with suitable illustrations. (12.5 Marks) (2014)
·
ಸುಧಾರಕರು
ಮತ್ತು ಆಡಳಿತಗಾರರು ವ್ಯಕ್ತಿಗತ ಮಾದರಿಗಳಾಗಿರುವುದಕ್ಕೆ ಒಂದು ಟಿಪ್ಪಣಿಯನ್ನು ಬರೆಯಿರಿ.
Write
a note on reformers and administrators who are role models for inculcating values.
(12.5 Marks) (2014)
·
ವಿಶೇಷವಾಗಿ
ಪತಂಜಲಿಯವರ ಪ್ರಕಾರ ಸದ್ಗುಣಗಳ ವರ್ಗೀಕರಣ
ಆಧರಿಸಿ ಮಾನವನ ಮೌಲ್ಯಗಳು ಮತ್ತು
ಅವುಗಳ ವಿಧಗಳನ್ನು ಚರ್ಚಿಸಿ. Elucidate
the human values and their types with special reference to Patanjali’s
classification of virtues. [15 Marks]
(2015)
·
"ನನ್ನ
ಧರ್ಮವು ತುಂಬಾ ಸರಳವಾಗಿದೆ. ನನ್ನ
ಧರ್ಮವು ದಯೆ" ಎಂದು 14 ನೇ ದಲೈ
ಲಾಮಾ ಹೇಳುತ್ತಾರೆ. ಅವರ ಜೀವನ ಮತ್ತು
ಬೋಧನೆಗಳಿಂದ ಯಾವ ಮೌಲ್ಯಗಳನ್ನು ಬೆಳೆಸಿಕೊಳ್ಳಬಹುದು
ಎಂಬುದನ್ನು ವಿವರಿಸಿ. "My
religion is very simple. My religion is kindness" says His Holiness the
14th Dalai Lama. Elaborate the values that can be inculcated from his life and
teachings, (Not more than 3OO words) 20 Marks (2017)
·
ಮೌಲ್ಯಗಳನ್ನು
ಬೆಳೆಸುವಲ್ಲಿ ಕುಟುಂಬ, ಸಮಾಜ ಮತ್ತು
ಶಿಕ್ಷಣ ಸಂಸ್ಥೆಗಳ ಪಾತ್ರವನ್ನು ವಿವರಿಸಿ. Explain
the role of family, Society and Educational institutions in inculcating values.
(Not more than 3OO words) 20 Marks (2017)
·
“ಕುಟುಂಬ ಮತ್ತು ಸಮಾಜವು ವ್ಯಕ್ತಿಯ ನೈತಿಕ ಮೌಲ್ಯಗಳನ್ನು ರೂಪಿಸುತ್ತವೆ.” ಆರಂಭಿಕ ಸಾಮಾಜಿಕ ವಿದ್ಯಮಾನಗಳು ಸಾರ್ವಜನಿಕ ಜೀವನದಲ್ಲಿ ನೈತಿಕ ನಿರ್ಣಯ ಕೈಗೊಳ್ಳುವಲ್ಲಿ ಹೇಗೆ ಪ್ರಭಾವ ಬೀರುತ್ತವೆ ಎಂಬುದನ್ನು ಸೂಕ್ತ ಉದಾಹರಣೆಗಳೊಂದಿಗೆ ಚರ್ಚಿಸಿ. “Family and society shape an individual's
ethical values.” Discuss how early social conditioning impacts ethical
decision-making in public life with examples. (150 words |10 marks) 2025
Section-II: Integrity
Integrity
·
ಸಮಗ್ರತೆಯನ್ನು
ವಿವರಿಸಿ. ಸಮಗ್ರತೆಯ ವಿವಿಧ ಬಗೆಗಳು ಮತ್ತು ಮಹತ್ವವನ್ನು
ವಿವರಿಸಿ. ಒಬ್ಬ ವ್ಯಕ್ತಿಯು ವೈಯಕ್ತಿಕ
ಸಮಗ್ರತೆಯನ್ನು ಹೇಗೆ ಸಾಧಿಸಬಹುದು ಎಂಬುದನ್ನು
ವಿವರಿಸಿ. Explain
integrity. Describe different types and significance of integrity. Describe how
an individual can achieve personal integrity. [15 Marks] (2015)
·
ಸಾರ್ವಜನಿಕ ಆಡಳಿತದಲ್ಲಿ ಸಮಗ್ರತೆ (ನೀತಿನಿಷ್ಠೆ) ಯ ಮಹತ್ವವನ್ನು ಚರ್ಚಿಸಿ ಮತ್ತು ನಿರ್ಧಾರ ತೆಗೆದುಕೊಳ್ಳುವಾಗ ಅದನ್ನು ಎತ್ತಿಹಿಡಿಯುವ ಮಾರ್ಗಗಳನ್ನು ಸೂಚಿಸಿ. ನೈತಿಕ ಆಡಳಿತದಲ್ಲಿ ಅದರ ಪಾತ್ರವನ್ನು ವಿವರಿಸಲು ಸೂಕ್ತ ಉದಾಹರಣೆಗಳನ್ನು ಒದಗಿಸಿ. Discuss the importance
of integrity in public administration and suggest ways to uphold it in
decision-making. Provide relevant examples to illustrate its role in ethical
governance. (150 words |10 marks) 2025
·
“ಪ್ರತಿಕೂಲ ಸಂದರ್ಭವನ್ನು ಹೆಚ್ಚಿನ ಎಲ್ಲಾ ಜನರೂ ಎದುರಿಸಬಹುದು. ನೀವು ಒಬ್ಬ ವ್ಯಕ್ತಿಯ ನಡತೆಯನ್ನು ಪರೀಕ್ಷಿಸಬೇಕಾದರೆ, ಆತನಿಗೆ ಅಧಿಕಾರ ನೀಡಿ.” – ಅಬ್ರಹಂ ಲಿಂಕನ್.
ನಾಗರಿಕ ಸೇವೆಗಳು ಮತ್ತು ನೈತಿಕ ಆಡಳಿತಕ್ಕೆ ಸಂಬಂಧಿಸಿದಂತೆ ಈ ಮೇಲಿನ ವ್ಯಾಖ್ಯಾನವು ಹೇಗೆ ಅನ್ವಯವಾಗುತ್ತದೆ ಎಂಬುದನ್ನು ಚರ್ಚಿಸಿ. ಜೊತೆಗೆ ಸಾರ್ವಜನಿಕ ಅಧಿಕಾರಿಗಳು ತಮ್ಮ ಕಾರ್ಯನಿರ್ವಹಣೆಯ ಸಂದರ್ಭದಲ್ಲಿ ಇದರ ಪ್ರಸ್ತುತತೆಯನ್ನು ಹೇಗೆ ಕಾಯ್ದುಕೊಳ್ಳುವರು ಎಂಬುದನ್ನು ಸೂಕ್ತ ಉದಾಹರಣೆಗಳೊಂದಿಗೆ ಬೆಳಕು ಚೆಲ್ಲಿ. “Nearly all men can stand adversity, but if
you want to test a man’s character, give him power.” – Abraham Lincoln. Discuss
how this quote applies to civil services and ethical governance, highlighting
its relevance in the conduct of public servants with suitable examples. (150
words |10 marks) 2025
Impartiality, Non- partisanship and Objectivity
·
ಸಾರ್ವಜನಿಕ ಸೇವೆಯ ಸಂದರ್ಭದಲ್ಲಿ ನಿಷ್ಪಕ್ಷಪಾತ, ಪಕ್ಷಾತೀತತೆ ಮತ್ತು ವಸ್ತುನಿಷ್ಠತೆ ಎಂದರೇನು ಎಂಬುದನ್ನು ವಿವರಿಸಿ. ದುರ್ಬಲ ವರ್ಗದ ಉನ್ನತಿಗಾಗಿ ಒಬ್ಬ ನಾಗರಿಕ ಸೇವಕನು ನಿಷ್ಪಕ್ಷಪಾತ ಮತ್ತು ವಸ್ತುನಿಷ್ಠತೆಯನ್ನು ಹೇಗೆ ಅಭ್ಯಾಸ ಮಾಡಬಹುದು? Explain
what is impartiality, non partisanship and objectivity in context to public
service. How can impartiality and objectivity can be practiced by a civil
servant for the upliftment of weaker section? [20 Marks] (2015)
·
ಸಾರ್ವಜನಿಕ ಆಡಳಿತದಲ್ಲಿ ನಿಷ್ಪಕ್ಷಪಾತ ಮತ್ತು ಪಕ್ಷಾತೀತತೆ ಮೌಲ್ಯಗಳ ನಡುವಿನ ವ್ಯತ್ಯಾಸವನ್ನು ಗುರುತಿಸಿ. Differentiate
between the value of impartiality and non-partisanship in public
administration. (Not more than 25O words) 15 Marks (2017)
Dedication to Public Service
·
ಒಬ್ಬ ನೌಕರನ ಸಾರ್ವಜನಿಕ ಸೇವೆಗೆ ಸಮರ್ಪಣೆಯನ್ನು ನಿರ್ಧರಿಸುವ ಅಂಶಗಳನ್ನು ವಿವರಿಸಿ. Explain the factors which determine
an employee’s dedication to public service. [15 Marks] (2015)
·
ಮಹಿಳಾ ಉನ್ನತಿಯ ಸಂದರ್ಭದಲ್ಲಿ ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಅರ್ಪಣಾ ಭಾವನೆಯನ್ನು ವಿಮರ್ಶಾತ್ಮಕವಾಗಿ ಮೌಲ್ಯಮಾಪನ ಮಾಡಿ. Critically
evaluate dedication for economically weaker section in the context of Women
Upliftment. (Not more than 15O words) 10 Marks (2017)
Empathy, Tolerance and Compassion towards the Weaker Sections
·
ಸಾರ್ವಜನಿಕ
ಆಡಳಿತದಲ್ಲಿ, ದುರ್ಬಲ ವರ್ಗದ ಬಗ್ಗೆ
ಸಹಿಷ್ಣುತೆ ಮತ್ತು ಅನುಕಂಪ ಉತ್ತಮ
ಆಡಳಿತಕ್ಕೆ ಸಹಾಯ ಮಾಡುತ್ತದೆ. ಸೂಕ್ತ
ಉದಾಹರಣೆಯೊಂದಿಗೆ ಮೌಲ್ಯಮಾಪನ ಮಾಡಿ. In Public administration, tolerance and
compassion towards the weaker section help for better governance. Evaluate with suitable example. (12.5 Marks)
(2014)
·
ತಾದಾತ್ಮ್ಯ,
ಸಹಾನುಭೂತಿ ಮತ್ತು ಅನುಕಂಪಗಳ ನಡುವಿನ
ವ್ಯತ್ಯಾಸವೇನು? ಕೆಲಸದಲ್ಲಿ ತಾದಾತ್ಮ್ಯದ ವರ್ತನೆಯನ್ನು ವಿವರಿಸಿ. What is the difference between empathy,
sympathy and compassion? Describe empathetic behaviour at work.[15 Marks]
(2015)
·
ಭಾರತೀಯ ಸಂದರ್ಭದಲ್ಲಿ ಸಹಿಷ್ಣುತೆ ಮತ್ತು ಅನುಕಂಪವನ್ನು ವಿವರಿಸಿ. ಸಾರ್ವಜನಿಕ ಆಡಳಿತದಲ್ಲಿ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಸಂಬಂಧಪಟ್ಟ ಪ್ರಾಧಿಕಾರವು ಸಹಿಷ್ಣುತೆ ಮತ್ತು ಅನುಕಂಪವನ್ನು ಎಷ್ಟು ಪರಿಣಾಮಕಾರಿಯಾಗಿ ಬಳಸಬಹುದು? Explain tolerance and compassion in
Indian context. How effectively can tolerance and compassion be used by the
respective authority in the process of decision making in public
administration?[15 Marks] (2015)
·
“ಒಂದು ರಾಷ್ಟ್ರವನ್ನು ಅದು ತನ್ನ ಅತ್ಯುನ್ನತ ಪ್ರಜೆಗಳನ್ನು ಹೇಗೆ ನಡೆಸಿಕೊಳ್ಳುತ್ತದೆ ಎಂಬ ಆಧಾರದಲ್ಲಿ ಅಳೆಯದೆ, ಅದು ತನ್ನ ಕೆಳಸ್ಥರದವರನ್ನು ನೋಡುವ ರೀತಿಯಿಂದ ಅಳೆಯಬೇಕು.” – ನೆಲ್ಸನ್ ಮಂಡೆಲಾ. ಸಾರ್ವಜನಿಕ ಆಡಳಿತದಲ್ಲಿ ಪರಾನುಭೂತಿ ಮತ್ತು ಸಹಿಷ್ಣುತೆಯ ಪಾತ್ರದ ಬಗ್ಗೆ ಮೇಲಿನ ಹೇಳಿಕೆ ಹೇಗೆ ಒತ್ತು ನೀಡುತ್ತದೆ? ದುರ್ಬಲ ವರ್ಗಗಳನ್ನು ಗಮನದಲ್ಲಿಟ್ಟುಕೊಂಡು ತರಲಾಗಿರುವ ಕಲ್ಯಾಣ ಯೋಜನೆಗಳ ಮಹತ್ವವನ್ನು ಉದಾಹರಣೆಗಳೊಂದಿಗೆ ಚರ್ಚಿಸಿ. “A nation should not be judged by how it
treats its highest citizens, but its lowest ones.” –Nelson Mandela. How does this quote
emphasize the role of empathy and tolerance in public administration? Discuss
its significance with examples of welfare policies aimed at weaker sections.
(250 words |15 marks) 2025
·
ಸಾರ್ವಜನಿಕ ಸೇವಾ ಅಧಿಕಾರಿಗಳು ನ್ಯಾಯಸಮ್ಮತವಾಗಿ ಹಾಗೂ ಸಹಾನುಭೂತಿಯುಳ್ಳವರಾಗಿರಬೇಕು, ಆದರೆ ಇದು ಸಂಘರ್ಷಕ್ಕೆ ಎಡೆಮಾಡಿಕೊಡಬಹುದು. ಈ ವಿಷಯವನ್ನು ಉದಾಹರಣೆಯೊಂದಿಗೆ ಚರ್ಚಿಸಿ. ನ್ಯಾಯೋಚಿತ ಮತ್ತು ನೈತಿಕ ಆಡಳಿತಕ್ಕಾಗಿ ಸಮತೋಲನವನ್ನು ಹೇಗೆ ಕಾಪಾಡಿಕೊಳ್ಳಬಹುದು. Public servants need to
be both fair and compassionate, but these can clash. Discuss this issue with
examples. How can a balance be maintained for fair and ethical governance? (150
words |10 marks) 2025
Civil Service Values
·
ಸಾರ್ವಜನಿಕ
ಆಡಳಿತದಲ್ಲಿ ಸಮಗ್ರತೆ ಮತ್ತು ನಿಷ್ಪಕ್ಷಪಾತದ
ಪಾತ್ರವನ್ನು ವಿವರಿಸಿ. Delineate
the role of integrity and impartiality in public administration. (12.5 Marks)
(2014)
·
ಸಾರ್ವಜನಿಕ ಆಡಳಿತಕ್ಕೆ ಸಂಬಂಧಿಸಿದಂತೆ ಸಮಗ್ರತೆ ಮತ್ತು ನಿಷ್ಪಕ್ಷಪಾತದ ಮಹತ್ವದ ಪಾತ್ರವನ್ನು ವಿಮರ್ಶಾತ್ಮಕವಾಗಿ ವಿವರಿಸಿ. Critically explain Integrity,
Impartiality and its significant role with reference to public administration.
(Not more than 15O words) 10 Marks (2017)
·
ಧಾರ್ಮಿಕ
ಸಂದರ್ಭದಲ್ಲಿ ಸಹಿಷ್ಣುತೆ, ನಿಷ್ಪಕ್ಷಪಾತ ಮತ್ತು ವಸ್ತುನಿಷ್ಠತೆಯ ಮೌಲ್ಯಗಳನ್ನು
ವಿವರಿಸಿ.
Explain the values of tolerance, impartiality and objectivity in religious
context. (Not more than 25O words) 15 Marks (2017)
·
ಸಾರ್ವಜನಿಕ
ಆಡಳಿತದಲ್ಲಿ ಸಮರ್ಪಣೆ ಮತ್ತು ವಸ್ತುನಿಷ್ಠತೆಯ
ಪರಿಕಲ್ಪನೆಯನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸಿ.
Critically analyze the concept of dedication and objectivity in public
administration. (Not more than 25O words) 15 Marks (2017)
·
“ಅತಿಯಾದ ಪರಾನುಭೂತಿಯು (ಎಂಪೆಥಿ) ಕೆಲವೊಮ್ಮೆ ನಿರ್ಧಾರ ತೆಗೆದುಕೊಳ್ಳುವಲ್ಲಿ ವಸ್ತುನಿಷ್ಠತೆಗೆ ವಿರುದ್ಧವಾಗಬಹುದು.” ಸೂಕ್ತ ಉದಾಹರಣೆಗಳೊಂದಿಗೆ ಈ ಸಂದಿಗ್ಧತೆಯನ್ನು ಪರೀಕ್ಷಿಸಿ. ಸಾರ್ವಜನಿಕ ಸೇವಕನು ಪರಾನುಭೂತಿ (ಎಂಪೆಥಿ) ಯನ್ನು ನ್ಯಾಯ ಮತ್ತು ನಿಷ್ಪಕ್ಷಪಾತದೊಂದಿಗೆ ಹೇಗೆ ಸಮತೋಲನಗೊಳಿಸಬಹುದು? “Excessive empathy can
sometimes conflict with objectivity in decision-making.” Examine this dilemma
with suitable examples. How can a public servant balance empathy with fairness
and impartiality? (150 words |10 marks) 2025
Section-III: Aptitude
Attitude - Content, structure, function; its relation with thoughts
and behavior
·
ಆಡಳಿತಗಾರನ
ಮೌಲ್ಯಗಳು, ಅವನ ಆಲೋಚನೆಗಳು ಮತ್ತು
ನಡವಳಿಕೆಯ ಮೇಲೆ ಬೀರುವ ಪರಿಣಾಮಗಳನ್ನು
ವಿವರಿಸಿ. Explain
the effect of values its relation with thoughts and behavior of the
Administrator. (12.5 Marks) (2014)
·
ಮನೋಭಾವ
ಮತ್ತು ಅದರ ರಚನೆಯನ್ನು ವಿವರಿಸಿ.
ಮನೋಭಾವದ ಪ್ರಮುಖ ಘಟಕ ಮಾದರಿಗಳನ್ನು
ವಿವರಿಸಿ. Explain
attitude and its structure. Describe the main component models of attitude.
(Not more than 15O words) 10 Marks (2017)
Moral and Political Attitudes
·
ರಾಜಕೀಯ
ಮನೋಭಾವಗಳು ಮತ್ತು ರಾಜಕೀಯ ಮನೋಭಾವಗಳ
ಮೇಲೆ ಪ್ರಭಾವ ಬೀರುವ ಅಂಶಗಳನ್ನು
ವಿವರಿಸಿ. Explain
political attitudes and factors influencing political attitudes. (Not more than
15O words) 10 Marks (2017)
Social Influence and Persuasion
·
ಸ್ವದೇಶಿ
ಚಳುವಳಿಯ ಉಗಮ ಮತ್ತು ಭಾರತದ
ಜನರ ಮನೋಭಾವದ ಮೇಲೆ ಅದರ
ಪ್ರಭಾವವನ್ನು ವಿವರಿಸಿ. Trace
the origin of Swadeshi Movement and its influence on the attitude of People in
India. (12.5 Marks) (2014)
·
ಸಾರ್ವಜನಿಕ
ಸೇವೆಯ ಮೇಲೆ ಸಾಮಾಜಿಕ ಪ್ರಭಾವವನ್ನು
ಚರ್ಚಿಸಿ. Discuss
Social influence on public service. (12.5 Marks) (2014)
·
ಸಾಮಾಜಿಕ
ಪ್ರಭಾವ ಮತ್ತು ಮನವೊಲಿಸುವಿಕೆಯ ನಡುವಿನ
ಸಂಬಂಧವನ್ನು ವಿವರಿಸಿ. Explain
the relationship between social influence and persuasion. (12.5 Marks) (2014)
·
ಸಂವಹನದ
ಮೂಲಭೂತ ಲಕ್ಷಣವಾಗಿ ಸಾಮಾಜಿಕ ಪ್ರಭಾವವನ್ನು ವಿವರಿಸಿ.
Explain social influence as fundamental feature of
communication. [15 Marks] (2015)
·
ಮನವೊಲಿಸುವಿಕೆಗೆ
ಅರಿವಿನ ವಿಧಾನಗಳು ಯಾವುವು? What are the
cognitive approaches to persuasion? [15
Marks] (2015)
·
ಅಸಾಮಂಜಸ್ಯ
ಮತ್ತು ಕೊರತೆಯು ಅಧಿಕ ಪರಿಣಾಮಕ್ಕೆ
ದಾರಿ ಮಾಡಿಕೊಡುತ್ತದೆ. ಇವುಗಳ ಬಗ್ಗೆ ವಿವರಿಸಿ.
Explain
dissonance and the less-leads-to-more effect. [15
Marks] (2015)
·
ಮನವೊಲಿಸುವಿಕೆ
ಎಂದರೇನು? ಸಂದೇಶಗಳನ್ನು ಬಳಸಿಕೊಂಡು ಮನೋಭಾವಗಳನ್ನು ಹೇಗೆ ಬದಲಾಯಿಸಬಹುದು? What is persuasion? How
can attitudes be changed using messages? (Not more than 15O words) 10 Marks
(2017)
·
ಬೇಡಿಕೆಯ
ಮೂಲಕ ಸಾಮಾಜಿಕ ಪ್ರಭಾವವನ್ನು ವಿವರಿಸಿ.
Explain
Social influence by demand. (Not more than 25O words) 15 Marks(2017)
·
ತ್ಯಾಜ್ಯ ವಿಲೇವಾರಿ ಮತ್ತು ಮರುಬಳಕೆಗೆ ಸಂಬಂಧಿಸಿದಂತೆ ಸಾರ್ವಜನಿಕ ಅಧಿಕಾರಿಗಳು ಸಾಮಾಜಿಕ ಪ್ರಭಾವ ಮತ್ತು ಮನವೂಲಿಸುವಿಕೆಯನ್ನು ಹೇಗೆ ಬಳಸಬಹುದು ಎಂಬುದನ್ನು ಚರ್ಚಿಸಿ. ಯಶಸ್ವೀ ತ್ಯಾಜ್ಯ ನಿರ್ವಹಣೆಯ ಕ್ರಮಗಳಿಂದ ನಡವಳಿಕೆ ಬದಲಾವಣೆಯ ಉದಾಹರಣೆಗಳನ್ನು ನೀಡಿ. Discuss how public
officials can use social influence and persuasion to promote responsible waste
disposal and recycling. Provide examples of successful waste management
initiatives driven by behavioural change. (150 words |10 marks) 2025
Aptitude and Foundational values for Civil Service
·
ನಾಗರಿಕ
ಸೇವೆಯ ಅತ್ಯಗತ್ಯ ಪರಿಕಲ್ಪನೆಗಳಾದ ಅಭಿರುಚಿ ಮತ್ತು ಮೂಲಭೂತ
ನಿಯಮಗಳನ್ನು ವಿಮರ್ಶಾತ್ಮಕವಾಗಿ ಮೌಲ್ಯಮಾಪನ ಮಾಡಿ. Aptitude and fundamental rules are
most essential concepts of civil service critically evaluate. (12.5 Marks)
(2014)
·
ನಾಗರಿಕ
ಸೇವೆಗಳ ಮೂಲಭೂತ ಮೌಲ್ಯಗಳನ್ನು ವಿವರಿಸಿ.
Explain
fundamental values of civil services. [20 Marks] (2015)
·
ನಾಗರಿಕ ಸೇವೆಗಳಲ್ಲಿ ಯುಕ್ತತೆ (ಕೌಶಲ್ಯತೆ ಮತ್ತು ಬುದ್ಧಿವಂತಿಕೆ) ಮತ್ತು ವರ್ತನೆ (ಮನಸ್ಥಿತಿ, ನೈತಿಕತೆ) ಗಳೆರಡರ ಮಹತ್ವವನ್ನು ವಿಶ್ಲೇಷಿಸಿ. ಸಾರ್ವಜನಿಕ ಆಡಳಿತದ ಉದಾಹರಣೆಗಳ ಮೂಲಕ ಸಮರ್ಥ ಆಡಳಿತಕ್ಕೆ ಯಾವುದು ಮುಖ್ಯ ಎಂಬುದನ್ನು ಸಮರ್ಥಿಸಿ. Analyse the significance of both
aptitude (skills, intelligence) and attitude (mindset, ethics) in civil services.
Justify which is more important for effective governance with examples from
public administration. (250 words |15 marks) 2025
Emotional intelligence and their utilities and application in
administration and governance,
·
ಭಾವನಾತ್ಮಕ
ಬುದ್ಧಿವಂತಿಕೆ ಎಂದರೇನು? ಅದರ ಪ್ರಮುಖ ಘಟಕಗಳನ್ನು
ವಿವರಿಸಿ. What is emotional intelligence?
Explain its major components.[20 Marks] (2015)
·
ಭಾವನಾತ್ಮಕ
ಬುದ್ಧಿವಂತಿಕೆ ಎಂದರೇನು? ಆಡಳಿತದಲ್ಲಿ ಭಾವನಾತ್ಮಕ ಬುದ್ಧಿವಂತಿಕೆಯ ಉಪಯುಕ್ತತೆಗಳು ಮತ್ತು ಅನ್ವಯಗಳನ್ನು ವಿವರಿಸಿ.
What
is emotional intelligence? Explain the utilities and applications of emotional
intelligence in administration and governance.
(Not more than 3OO words) 20 Marks (2017)
·
ಕ್ರೀಡೆಗಳಲ್ಲಿ ಒತ್ತಡವನ್ನು ನಿಭಾಯಿಸುವಲ್ಲಿ, ತಂಡ ಕಾರ್ಯ ಮತ್ತು ನಾಯಕತ್ವಕ್ಕೆ ಸಂಬಂಧಿಸಿದಂತೆ ಭಾವನಾತ್ಮಕ ಬುದ್ಧಿವಂತಿಕೆಯ ಪಾತ್ರವನ್ನು ಚರ್ಚಿಸಿ. Discuss the role of
emotional intelligence in sports, focusing on its importance in handling
pressure, teamwork and leadership. (150 words |10 marks)
Contributions of moral thinkers from India and the world
·
ಸಮಾಜವಾದಿ
ಪರಿಕಲ್ಪನೆಯ ಬಗ್ಗೆ ಗಾಂಧಿ ಮತ್ತು
ಮಾರ್ಕ್ಸ್ ನಿಲುವುಗಳಲ್ಲಿನ ವ್ಯತ್ಯಾಸವನ್ನು ಬರೆಯಿರಿ. Differentiate
Gandhian concepts of Socialism to Marxian concept of socialism. (12.5 Marks)
(2014)
·
ಜೆ.ಎಸ್. ಮಿಲ್ ಆಕ್ಟ್
ಉಪಯುಕ್ತತಾವಾದ, ಚಾರ್ವಾಕ ಮತ್ತು ಕರ್ಮಯೋಗಕ್ಕೆ
ಸಂಬಂಧಿಸಿದಂತೆ ಮಾನವ ಕ್ರಿಯೆಯ ಸಾರ,
ನಿರ್ಣಾಯಕಗಳು ಮತ್ತು ಪರಿಣಾಮಗಳನ್ನು ವಿಮರ್ಶಾತ್ಮಕವಾಗಿ
ಪರಿಗಣಿಸಿ. Critically
consider the essence, determinants and consequences of human action with
reference to J. S. Mill act utilitarianism, Charvaka and Karmayoga. (20M)
(2015)
·
ಒಬ್ಬ ಭಾರತೀಯ ಮತ್ತು ಒಬ್ಬ ಪಾಶ್ಚಾತ್ಯ ನೈತಿಕ ತತ್ವಶಾಸ್ತ್ರಜ್ಞರನ್ನು ಆಯ್ಕೆ ಮಾಡಿ ಮತ್ತು ಅವರ ನೈತಿಕ ಚಿಂತನೆಗಳು ಆಧುನಿಕ ಸಾರ್ವಜನಿಕ ಆಡಳಿತಕ್ಕೆ ಹೇಗೆ ಅನ್ವಯವಾಗುತ್ತವೆ ಎಂಬುದನ್ನು ಚರ್ಚಿಸಿ. Select one Indian and
one Western moral philosopher and discuss how their ethical ideas can be
applied to modern public administration. (150 words |10 marks)
Case Studies
· ನೀವು ಪ್ರಕೃತಿ ವಿಕೋಪಕ್ಕೆ ಗುರಿಯಾದ ಜನರು ತಮ್ಮ ಜೀವನ ನಿರ್ವಹಣೆಯ ಆಧಾರವನ್ನು ಕಳೆದುಕೊಂಡವರ ದಾಖಲಾತಿಗಳನ್ನು ಪರೀಕ್ಷಿಸಿ ದೃಢೀಕರಿಸುವ ಕಚೇರಿಯಲ್ಲಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವಿರಿ. ಒಂದು ದಿನ ಅನಕ್ಷರಸ್ಥ ಹಿರಿಯ ನಾಗರಿಕರೊಬ್ಬರು ನಿಮ್ಮನ್ನು ಭೇಟಿ ಮಾಡಿ, ಸರ್ಕಾರದಿಂದ ಬರುವ ಸವಲತ್ತುಗಳನ್ನು ಪಡೆಯಲು ನಿಮ್ಮ ಸಹಾಯವನ್ನು ನಿರೀಕ್ಷಿಸುತ್ತಿದ್ದಾರೆ. ಅವರು ತಂದಿರುವ ದಾಖಲಾತಿಗಳನ್ನು ಪರಿಶೀಲಿಸಿದ ಬಳಿಕ ಸರ್ಕಾರವು ನೀಡುತ್ತಿರುವ ಸವಲತ್ತುಗಳನ್ನು ಪಡೆಯಲು ಸಾಧ್ಯವಿಲ್ಲವೆಂದು ನಿಮಗೆ ತಿಳಿದು ಬರುತ್ತದೆ. ವಾಸ್ತವದಲ್ಲಿ ಆ ಹಿರಿಯ ನಾಗರಿಕರು ಪ್ರಕೃತಿ ವಿಕೋಪದಲ್ಲಿ ತಾವು ಕಳೆದುಕೊಂಡಿರುವುದಷ್ಟೇ ಜೀವನ ನಿರ್ವಹಣೆಗೆ ಆಧಾರವಾಗಿರುತ್ತದೆ. ಆದ್ದರಿಂದ, ಆತನ ಮನವಿಯನ್ನು ತಿರಸ್ಕರಿಸಲು ನೀವು ಸಿದ್ಧರಾಗಿಲ್ಲ. ಈ ಸನ್ನಿವೇಶವು ಹಿರಿಯ ನಾಗರಿಕರಿಗೆ ಸಹಾಯ ಮಾಡಬೇಕೆ? ಅಥವಾ ಇಲ್ಲವೇ ಎಂದು ನಿಮ್ಮಲ್ಲಿ ಗೊಂದಲ ಸೃಷ್ಟಿಸಿದೆ. ನೀವು ಈ ಸನ್ನಿವೇಶವನ್ನು ಹೇಗೆ ಬಗೆಹರಿಸುವಿರಿ? ವಿವರಿಸಿ.
·
You are an Officer in charge of
authenticating the documents of people who lost their life support in a natural
disaster. An illiterate senior citizen comes to meet you one day anticipating
your support in getting the benefit proclaimed by the Government. After verifying
the papers produced by him, you understand that they are not the documents as
expected to be a beneficiary. You are not ready to reject his request because
in reality he has no support for survival other than what he has lost in the
disaster. This leads to a conflicting situation of either to support him or
not. How do you resolve this situation? Explain. (Not more than 3OO words) 20
Marks (2017)
---------------------------------------------------------------------------------------------------------------
ಪ್ರವಾಹ ಪೀಡಿತ ಪ್ರದೇಶದಲ್ಲಿ ನೀವೂಬ್ಬರು ಜಿಲ್ಲಾಧಿಕಾರಿಗಳಾಗಿದ್ದೀರಿ. ಅನಿರೀಕ್ಷಿತ ಅತ್ಯಧಿಕ ಮಳೆಯಿಂದ ಪ್ರವಾಹ ಉಂಟಾಗಿ ಅನೇಕ ಹಳ್ಳಿಗಳು ಜಲಾವೃತಗೊಂಡಿದ್ದು, ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ. ಸರ್ಕಾರವು ಆಹಾರ ಸಾಮಗ್ರಿಗಳು, ವೈದ್ಯಕೀಯ ನೆರವು ಮತ್ತು ರಕ್ಷಣಾ ದೋಣಿಗಳು ಮೊದಲಾದ ಸೀಮಿತ ನೆರವನ್ನು ಮಾತ್ರ ಒದಗಿಸಿರುತ್ತದೆ. ಆದರೆ ಇದರ ನಡುವೆ ನೀವು ಹಲವಾರು ಸವಾಲುಗಳನ್ನು ಎದುರಿಸುವಿರಿ.
(a) ಸಂಪನ್ಮೂಲ ಕೊರತೆ: ಪರಿಹಾರ ಸಾಮಗ್ರಿಗಳು ಎಲ್ಲಾ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಮನಾಗಿ ಹಂಚಲು ಸಾಲದು.
(b) ರಾಜಕೀಯ ಒತ್ತಡ: ಸ್ಥಳೀಯ ರಾಜಕಾರಣಿಗಳು ತಮ್ಮ ಕ್ಷೇತ್ರಗಳಿಗೆ ಸಹಾಯಕ್ಕೆ ಆದ್ಯತೆ ನೀಡುವಂತೆ ನಿಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ.
(c) ಮಾಧ್ಯಮ ಪರಿಶೀಲನೆ: ವಾರ್ತಾವಾಹಿನಿಗಳು ಸಂಪನ್ಮೂಲಗಳ, ಪರಿಹಾರ ವಿತರಣೆಯಲ್ಲಿನ ಪಾರದರ್ಶಕತೆಯನ್ನು ಪ್ರಶ್ನಿಸಿ ಪ್ರಸಾರ ಮಾಡುತ್ತಿವೆ.
i.
ಸೀಮಿತ ಸಂಪನ್ಮೂಲಗಳನ್ನು ನ್ಯಾಯ ಮತ್ತು ದಕ್ಷತೆಯಿಂದ ಹೇಗೆ ವಿತರಣೆ ಮಾಡುವಿರಿ? ನೀವು ರಾಜಕೀಯ ಒತ್ತಡಕ್ಕೆ ಒಳಗಾಗುವಿರಾ ಅಥವಾ ನೆರವನ್ನು ಸಮನಾಗಿ ವಿತರಿಸುವಿರಾ?
ii.
ಪರಿಹಾರ ವಿತರಣೆಯಲ್ಲಿ ಸಾರ್ವಜನಿಕ ನಂಬಿಕೆ ಮತ್ತು ಪಾರದರ್ಶಕತೆಯನ್ನು ಕಾಪಾಡುವಲ್ಲಿ ಯಾವ ಕ್ರಮಗಳನ್ನು ಕೈಗೊಳ್ಳುವಿರಿ.
You are the District Collector of a flood-prone
region. Due to unexpected heavy rains, floods have devastated villages,
displacing thousands. The government has allocated limited relief resources,
including food, medical aid and rescue boats. However, you are faced with
several challenges:
(a) Resource Shortage: The relief supplies are not
enough to cover all affected areas equally.
(b) Political Pressure: Local politicians are
pressuring you to prioritise aid for their constituencies.
(c) Media Scrutiny: News agencies are covering the
relief efforts, questioning transparency in resource distribution.
i.
How will you allocate limited resources
fairly and efficiently? Will you yield to political pressure or ensure
equitable distribution of aid?
ii.
What steps will you take to maintain
transparency and public trust in relief operations? (300 words | 20 marks) 2025
---------------------------------------------------------------------------------------------------------------
ನೀವು ಒಂದು ಅಪರೂಪದ ಖಾಯಿಲೆಗೆ ಜೀವರಕ್ಷಕ ಔಷಧವನ್ನು ಅಭಿವೃದ್ಧಿಗೊಳಿಸುತ್ತಿರುವ ಓರ್ವ ಹಿರಿಯ ವೈದ್ಯಕೀಯ ಸಂಶೋಧಕರಾಗಿರುತ್ತೀರಿ. ಆರಂಭಿಕ ಪರೀಕ್ಷೆಗಳು ಉತ್ತೇಜನದಾಯಕವಾಗಿವೆ. ಆದರೆ ಅಧಿಕೃತ ಅನುಮೋದನೆಗೆ ಮುಂಚಿತವಾಗಿ ಸಂಪೂರ್ಣ ಪರೀಕ್ಷಾ ಪ್ರಕ್ರಿಯೆಗಳು ಇನ್ನೂ ಐದು ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಅದೇ ಸಮಯದಲ್ಲಿ ಸಾವಿನ ಅಂಚಿನಲ್ಲಿರುವ ರೋಗಿಗಳು ವೈದ್ಯಕೀಯ ನೆರವಿಗೆ ಹಾತೊರೆಯುತ್ತಿದ್ದಾರೆ.
ನೈತಿಕ ಗೊಂದಲಗಳು ಎದ್ದಿದ್ದು, ಕೆಲವು ವೈದ್ಯರು ಕನಿಕರ ತೋರುವಂತೆ ಒತ್ತಾಯಿಸುತ್ತಿದ್ದು, ರೋಗಿಗಳು ಏನನ್ನೂ ಕಳೆದುಕೊಳ್ಳುವುದಿಲ್ಲ ಎಂದು ವಾದಿಸುತ್ತಿದ್ದಾರೆ. ನಿಯಂತ್ರಣಾಧಿಕಾರಿಗಳು ದೀರ್ಘಾವಧಿಯ ಅಡ್ಡ ಪರಿಣಾಮಗಳ ಭಯದಿಂದ ಕಟ್ಟುನಿಟ್ಟಿನ ಪರೀಕ್ಷೆಗಳಿಗೆ ಒತ್ತಾಯಿಸುತ್ತಿದ್ದಾರೆ. ಔಷಧ ತಯಾರಿಸುವ ಕಂಪನಿಗಳು ಹೆಚ್ಚಿನ ಲಾಭದ ಅವಕಾಶವಿರುವುದರಿಂದ ಶೀಘ್ರ ಅನುಮೋದನೆಗೆ ಒತ್ತಡ ಹೇರುತ್ತಿವೆ. ರೋಗಿಗಳ ಪರ ಹೋರಾಡುವ ಗುಂಪುಗಳು ಔಷಧಗಳು ಸಿಗಬೇಕೆಂದು ಸರ್ಕಾರದ ಮೇಲೆ ಒತ್ತಡ ಹಾಕುತ್ತಿವೆ.
(a) ಪೂರ್ಣ ಅನುಮೋದನೆಗೆ ಮೊದಲೇ ಸಾವಿನ ಅಂಚಿನಲ್ಲಿರುವ ರೋಗಿಗಳಿಗೆ ಪ್ರಯೋಗಾತ್ಮಕ ಔಷಧಿಗಳನ್ನು ನೀಡಬಹುದೇ? ಯಾವ ನೈತಿಕ ಸುರಕ್ಷತಾ ಕ್ರಮಗಳು ಇರಬೇಕು?
(b) ವೈದ್ಯಕೀಯ ನೈತಿಕತೆಯನ್ನು ಕಾಪಾಡುತ್ತಲೇ ಔಷಧ ತಯಾರಿಕಾ ಕಂಪನಿಗಳ ಒತ್ತಡವನ್ನು ನೀವು ಹೇಗೆ ನಿಭಾಯಿಸುವಿರಿ?
(c) ಸಾರ್ವಜನಿಕ ಸುರಕ್ಷತೆ ಮತ್ತು ವೈದ್ಯಕೀಯ ಅನ್ವೇಷಣೆಯನ್ನು ಸಮತೋಲನಗೊಳಿಸುವಲ್ಲಿ ಸರ್ಕಾರಿ ಸಂಸ್ಥೆಗಳು ಯಾವ ಪಾತ್ರವನ್ನು ವಹಿಸಬೇಕು?
You are a senior medical researcher developing a
life-saving drug for a rare disease. Initial trials are promising, but the full
testing process will take five more years before official approval. Meanwhile,
thousands of terminally ill patients are desperate for treatment. Ethical
dilemmas arise:
Some doctors urge compassionate use, arguing that patients
have nothing to lose. Regulatory authorities insist on strict trials, fearing
unknown long-term side effects. Pharmaceutical companies push for quick
approval, seeing a major profit opportunity. Patient advocacy groups demand
access, pressuring the government.
a) Should
experimental drugs be given to terminally ill patients before full approval?
What ethical safeguards should be in place?
b) How
will you handle pressure from pharmaceutical companies while maintaining
medical ethics?
c) What
role should government agencies play in balancing medical innovation with
public safety? (300 words | 20 marks) 2025
---------------------------------------------------------------------------------------------------------------
ನೀವು ಮಹಾನಗರಪಾಲಿಕೆಯ ಮುನಿಸಿಪಲ್ ಕಮಿಷನರ್ ಆಗಿರುವಿರಿ. ಚಳಿಗಾಲ ಸಮೀಪಿಸುತ್ತಿರುವಂತೆ ಶೀತಗಾಳಿಯ ಪರಿಣಾಮವಾಗಿ ವಸತಿರಹಿತರ ಸಾವುಗಳು ತೀವ್ರವಾಗಿ ಹೆಚ್ಚಾಗುತ್ತಿದೆ. ವಸತಿರಹಿತ ಜನರು, ವಲಸೆ ಕಾರ್ಮಿಕರು, ವೃದ್ಧರು ಮತ್ತು ಪರಿತ್ಯಕ್ತ ಮಹಿಳೆಯರು ಒಳಗೊಂಡಂತೆ ಅನೇಕರು ಪಾದಚಾರಿ ಮಾರ್ಗಗಳಲ್ಲಿ ಮಲಗುತ್ತಾರೆ.
ನಗರದಲ್ಲಿ ಸರ್ಕಾರದಿಂದ ನಿರ್ವಹಿಸಲ್ಪಡುವ ರಾತ್ರಿ ತಾಣಗಳು ಇದ್ದರೂ ಅವುಗಳು ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ ಎಂಬುದನ್ನು ವರದಿಗಳು ಸೂಚಿಸುತ್ತಿವೆ — ತಿಳುವಳಿಕೆಯ ಕೊರತೆ, ಸಾಮಾಜಿಕ ಕಳಂಕ ಮತ್ತು ಅಸುರಕ್ಷಿತ ವಾತಾವರಣಗಳು ಕಾರಣ. ಜೊತೆಗೆ ಕೆಲವು ವ್ಯಾಪಾರಿ ಗುಂಪುಗಳು ತಮ್ಮ ವ್ಯಾಪಾರಕ್ಕೆ ತೊಂದರೆಯಾಗುತ್ತದೆ ಎನ್ನುವ ಕಾರಣಕ್ಕೆ ಪಾದಚಾರಿ ಮಾರ್ಗಗಳ ಅತಿಕ್ರಮಣವನ್ನು ತಡೆಗಟ್ಟಲು ಲಾಬಿ ಮಾಡುತ್ತಿವೆ. ಮಾಧ್ಯಮವು ಆಡಳಿತದ ಹೊಣೆಗಾರಿಕೆಯನ್ನು ಪ್ರಶ್ನಿಸಲು ಆರಂಭಿಸಿದೆ.
(a) ದೀರ್ಘಾವಧಿ ಪುನರ್ವಸತಿಯ ಸಮಸ್ಯೆಯನ್ನು ಹೋಗಲಾಡಿಸಲು ವಸತಿರಹಿತರಿಗೆ ತಕ್ಷಣದ ಪರಿಹಾರ ಕ್ರಮಗಳನ್ನು ಒದಗಿಸುವುದನ್ನು ಹೇಗೆ ಖಾತರಿಪಡಿಸುವಿರಿ?
(b) ದುರ್ಬಲವರ್ಗದ ಜನರ ಹಕ್ಕುಗಳ ಜೊತೆಗೆ ವ್ಯವಹಾರಗಳ ಆರ್ಥಿಕ ಕಾಳಜಿಯನ್ನು ನೀವು ಹೇಗೆ ಸಮತೋಲನಗೊಳಿಸುವಿರಿ?
You are the Municipal Commissioner of a metropolitan
city. As winter approaches, there has been a sharp increase in homeless deaths
due to cold waves. Many homeless individuals, including migrant labourers,
elderly and abandoned women, sleep on pavements. While the city has
government-run night shelters, reports indicate they are underutilized due to
poor awareness, social stigma, and unsafe conditions. Additionally, a few
commercial groups are lobbying to clear footpaths to prevent ‘encroachments’
that affect their businesses. The media has begun questioning the
administration’s accountability.
(a) How will you ensure immediate relief for the
homeless while addressing long-term rehabilitation?
(b) How will you balance the economic concerns of
businesses with the rights of vulnerable people? (300 words | 20 marks) 2025
---------------------------------------------------------------------------------------------------------------
ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿರುವ ಮೀರಾ, ಅವರು ಅಕ್ರಮ ವಸಾಹತುಗಳನ್ನು ತೆರವುಗೊಳಿಸುವ ಅಭಿಯಾನದ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಈ ಪ್ರಕ್ರಿಯೆಯು ಕಾನೂನಾತ್ಮಕವಾಗಿದ್ದರೂ, ಅನೇಕ ಬಾಧಿತ ಕುಟುಂಬಗಳು ಬಡವರಾಗಿದ್ದು ಅವರಿಗೆ ಅನ್ಯ ವಸತಿಯು ಇಲ್ಲ ಎಂದು ಕಂಡುಕೊಂಡರು. ಅವರನ್ನು ತೆರವುಗೊಳಿಸುವುದು ಬಹಳ ಸಂಕಷ್ಟಗಳಿಗೆ ಎಡೆಮಾಡಿಕೊಡುತ್ತದೆ, ಆದರೆ ಈ ಪ್ರಕ್ರಿಯೆಯನ್ನು ನಿಧಾನಗೊಳಿಸುವುದು ಕಾನೂನಾತ್ಮಕ ಸಂಘರ್ಷಕ್ಕೆ ಹಾಗೂ ಪಕ್ಷಪಾತದ ಆರೋಪಗಳಿಗೆ ಕಾರಣವಾಗಬಹುದು.
(a) ಮೀರಾ ಅವರು ಕಟ್ಟುನಿಟ್ಟಾಗಿ ಕಾನೂನಿಗೆ ಅನುಗುಣವಾಗಿ ಪ್ರಕ್ರಿಯೆಯನ್ನು ಮುಂದುವರೆಸಬೇಕೇ ಅಥವಾ ಪರಾನುಭೂತಿಯ ವಿಧಾನವನ್ನು ಅನುಸರಿಸಬೇಕೇ?
(b) ಕಾನೂನಾತ್ಮಕ ಕರ್ತವ್ಯವನ್ನು ಅನುಕಂಪದೊಂದಿಗೆ ಹೇಗೆ ಸರಿದೂಗಿಸಲು ಸಾಧ್ಯ?
(c) ಯಾವ ದೀರ್ಘಾವಧಿ ನೀತಿಯ ಪರಿಹಾರೋಪಾಯಗಳು ಇಂತಹ ಸಂದಿಗ್ಧತೆಯಿಂದ ಹೊರಬರಲು ಸಹಾಯಕವಾಗುತ್ತವೆ?
Meera, a District Magistrate, is overseeing an
anti-encroachment drive to clear illegal settlements. While the action is legally
mandated, she finds that many affected families are poor and have no
alternative housing. Evicting them would cause immense suffering, but delaying
the operation could result in legal consequences and accusations of
favouritism.
(a) Should
Meera proceed strictly as per the law or consider a more empathetic approach?
(b) How can she balance legal duty with compassion?
(c) What long-term policy solutions can address such
dilemmas? (300 words | 20 marks) 2025
---------------------------------------------------------------------------------------------------------------
ನಿಮ್ಮ ಸ್ವಂತ ಜಿಲ್ಲೆಯಲ್ಲಿ ನೀವು ಒಬ್ಬ ಕೆಎಎಸ್ ಅಧಿಕಾರಿಯಾಗಿ ನಿಯೋಜನೆಗೊಂಡಿರುವಿರಿ. ನಿಮ್ಮ ತಂದೆಯವರು ಓರ್ವ ಗೌರವಾನ್ವಿತ ರಾಜಕೀಯ ನಾಯಕರಾಗಿದ್ದು, ಸಾರ್ವಜನಿಕ ಹಣದ ದುರೂಪಯೋಗಕ್ಕೆ ಸಂಬಂಧಿಸಿದಂತೆ ಅವರ ಮೇಲೆ ಆರೋಪವಿದೆ. ಆಡಳಿತದ ಮುಖ್ಯಸ್ಥರಾಗಿ ನೀವು ನ್ಯಾಯಸಮ್ಮತ ಮತ್ತು ನಿಷ್ಪಕ್ಷಪಾತ ತನಿಖೆ ಕೈಗೊಳ್ಳಬೇಕಾಗಿದೆ.
ನಿಮ್ಮ ಕುಟುಂಬ ನಿಷ್ಠೆಯನ್ನು ಅಪೇಕ್ಷಿಸುತ್ತಿದೆ, ಆದರೆ ಮಾಧ್ಯಮ ಮತ್ತು ವಿರೋಧಪಕ್ಷಗಳು ನೀವು ಪಕ್ಷಪಾತಿಗಳೆಂದು ದೂಷಿಸುತ್ತಿವೆ. ಅಧೀನ ಅಧಿಕಾರಿಗಳು ಕುಟುಂಬ ಸಂಬಂಧಗಳ ಕಾರಣ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಸಾರ್ವಜನಿಕರು ನಿಮ್ಮ ಪ್ರತಿಕ್ರಿಯೆಯನ್ನು ಗಮನಿಸುತ್ತಿದ್ದಾರೆ ಏಕೆಂದರೆ ಈ ಪ್ರಕರಣವು ಆಡಳಿತದಲ್ಲಿನ ನಂಬಿಕೆ ಮತ್ತು ಹೊಣೆಗಾರಿಕೆಯ ಮೇಲೆ ಪ್ರಭಾವ ಬೀರುತ್ತದೆ.
(a) ನಿಮ್ಮ ಕುಟುಂಬದವರು ಈ ಪ್ರಕರಣದಲ್ಲಿ ಭಾಗಿಯಾಗಿರುವುದರಿಂದ ವಸ್ತುನಿಷ್ಠತೆ ಮತ್ತು ನ್ಯಾಯಸಮ್ಮತತನವನ್ನು ನೀವು ಹೇಗೆ ಕಾಯ್ದುಕೊಳ್ಳುವಿರಿ?
(b) ನಿಮ್ಮ ನಿರ್ಣಯದಲ್ಲಿ ಸಾರ್ವಜನಿಕ ನಂಬಿಕೆ ಮತ್ತು ಸಾಂಸ್ಥಿಕ ನಿಷ್ಠೆಯನ್ನು ಖಾತರಿಗೊಳಿಸಲು ಯಾವ ಕ್ರಮಗಳನ್ನು ಕೈಗೊಳ್ಳುವಿರಿ?
(c) ಈ ಸಂದರ್ಭದಲ್ಲಿ ವೈಯಕ್ತಿಕ ಭಾವೋದ್ವೇಗಗಳು ಮತ್ತು ವೃತ್ತಿಯ ಜವಾಬ್ದಾರಿಗಳನ್ನು ಹೇಗೆ ನಿಭಾಯಿಸುವಿರಿ?
You are a KAS officer posted in your home district.
Your father, a respected political leader, is under investigation for alleged
misuse of public funds. As the head of the administration, you are expected to
ensure a fair and unbiased inquiry. Your family expects loyalty, while the
media and opposition parties accuse you of favouritism. Meanwhile, your junior
officers are hesitant to take action due to your familial ties. The public is
watching your response closely, as this case will impact the credibility of
governance and public trust.
(a) How will you maintain objectivity and fairness
while dealing with an inquiry involving your family?
(b) What steps will you take to ensure public trust
and institutional integrity in your decision?
(c) How will you handle personal emotions and
professional responsibilities in this situation? (300 words | 20 marks) 2025
---------------------------------------------------------------------------------------------------------------
ಒಂದು ಮಹಾನಗರ ಪಾಲಿಕೆಯ ಪೋಲೀಸ್ ಕಮಿಷನರ್ ಆಗಿರುವ ನೀವು, ಭದ್ರತೆಯನ್ನು ಹೆಚ್ಚಿಸಲು ಮತ್ತು ಅಪರಾಧಗಳನ್ನು ತಡೆಯಲು ಕೃತಕ ಬುದ್ಧಿಮತ್ತೆ (AI) ನಿರ್ಮಿತ ಮುಖ ಗುರುತಿಸುವ ವ್ಯವಸ್ಥೆಯನ್ನು ಪರಿಚಯಿಸುತ್ತೀರಿ. ಈ ವ್ಯವಸ್ಥೆಯಿಂದ ಅಪರಾಧಿಗಳಿಗೆ ಪತ್ತೆಹಚ್ಚಬಹುದು ಮತ್ತು ಸಾರ್ವಜನಿಕ ಸ್ಥಳಗಳನ್ನು ಮೇಲ್ವಿಚಾರಣೆ ಮಾಡಬಹುದು.
ಆದರೆ ಕೆಲವು ಕಾಳಜಿಗಳು ವ್ಯಕ್ತವಾಗಿವೆ: ನಾಗರಿಕ ಹಕ್ಕುಗಳ ಹೋರಾಟಗಾರರು ಇದು ಖಾಸಗೀತನವನ್ನು ಉಲ್ಲಂಘಿಸುತ್ತದೆ ಎಂದು ವಾದಿಸುತ್ತಿದ್ದಾರೆ; ಕೃತಕ ಬುದ್ಧಿಮತ್ತೆ ಪೂರ್ವಾಗ್ರಹದಿಂದ ಕೂಡಿದೆ ಎಂಬ ವರದಿಗಳು ಬಂದಿವೆ; ಕಾನೂನು ಜಾರಿಗೊಳಿಸುವ ಅಧಿಕಾರಿಗಳು ಇದರಿಂದ ಅಪರಾಧ ಕಡಿಮೆಯಾಗಿದೆ ಎಂದು ಹೇಳುತ್ತಿದ್ದಾರೆ; ತಾಂತ್ರಿಕ ಕಂಪನಿಗಳು ಮತ್ತು ರಾಜಕೀಯ ನಾಯಕರು ರಾಷ್ಟ್ರೀಯ ಭದ್ರತೆಯನ್ನು ಉಲ್ಲೇಖಿಸಿ AI ಬಳಕೆಯನ್ನು ವಿಸ್ತರಿಸಲು ಒತ್ತಡ ಹೇರುತ್ತಿದ್ದಾರೆ.
(a) ಕೃತಕ ಬುದ್ಧಿಮತ್ತೆಯ ಪೋಲೀಸಿಂಗ್ ನೀತಿಗಳು ನೈತಿಕವಾಗಿ ಪೂರ್ವಾಗ್ರಹವಿಲ್ಲದಂತೆ ಮತ್ತು ಖಾಸಗೀತನವನ್ನು ಸಂರಕ್ಷಿಸುವಂತೆ ಹೇಗೆ ಖಾತರಿಪಡಿಸುವಿರಿ?
(b) ಕಾನೂನು ಜಾರಿ ಸಂಸ್ಥೆಗಳಿಂದ ಕೃತಕ ಬುದ್ಧಿಮತ್ತೆಯ ದುರುಪಯೋಗವನ್ನು ತಡೆಗಟ್ಟಲು ಯಾವ ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವಿರಿ?
(c) ಒಬ್ಬ ಮುಗ್ಧನನ್ನು ತಪ್ಪಾಗಿ ಅಪರಾಧಿ ಎಂದು ಗುರುತಿಸಿದರೆ ಯಾವ ಜವಾಬ್ದಾರಿಯುತ ಕ್ರಮಗಳನ್ನು ಅನುಸರಿಸಬೇಕು?
As the Police Commissioner of a metropolitan city,
you have introduced an AI-based facial recognition system to enhance security
and crime prevention. The system can track potential criminals and monitor
public spaces in real time. However, concerns have emerged: civil rights
activists argue that it violates privacy and may be used for mass surveillance;
reports suggest that AI has biases, leading to wrongful identification of
marginalized groups. Law enforcement officers support the system, claiming it
has reduced crime. Tech companies and political leaders push for expanding AI
use, citing national security.
(a) How will you ensure that AI-based policing
remains ethical, unbiased, and respects individual privacy?
(b) What safeguards will you implement to prevent
misuse of AI by law enforcement agencies?
(c) If the AI system incorrectly flags an innocent
person as a criminal, what accountability measures should be in place? (300
words | 20 marks) 2025
No comments:
Post a Comment